ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಶು ಆಸ್ಪತ್ರೆಯಲ್ಲಿ ರೈತರಿಗೆ ಜಾನುವಾರುಗಳ ಮೇವಿನ ಬೀಜಗಳನ್ನು ವಿತರಣೆ ಮಾಡಲಾಯಿತು.
ಹನೂರು ತಾಲ್ಲೂಕಿನಾದ್ಯಂತ ಬರ ಘೋಷಣೆಯಾಗಿರುವುದರಿಂದ ಇಂದು ಹನೂರು ಪಟ್ಟಣದ ಸರ್ಕಾರಿ ಪಶುವೈದ್ಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಸಕ್ತ ನಮ್ಮ ರೈತರುಗಳಿಗೆ ಮೇವಿನ ಬೀಜಗಳಾದ ಹೈಬ್ರಿಡ್ ಜೊವಾರ್ ಬಾಜ್ರಾಗಳ ತಳಿಯನ್ನು ವಿತರಿಸಲಾಯಿತು ಈ ಬೀಜದಿಂದ ಮುಂದಿನ ದಿನಗಳಲ್ಲಿ ಮಳೆಯಾಗುವ ಸಮಯದಲ್ಲಿ ಬೀಜಗಳನ್ನು ಬಿತ್ತಿ ತಮ್ಮ ತಮ್ಮ ಜಾನುವಾರುಗಳನ್ನು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಹನೂರು ತಾಲ್ಲೂಕಿನ ಪಶುವೈದ್ಯಾಧಿಕಾರಿಗಳಾದ ಸಿದ್ದರಾಜು ತಿಳಿಸಿದರು . ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಾದ ರಾಜು,ನವೀನ್ ಸೇರಿದಂತೆ ರೈತ ಮುಖಂಡರುಗಳು ಹಾಜರಿದ್ದರು .
ವರದಿ-ಉಸ್ಮಾನ್ ಖಾನ್
