ಬಾಗಲಕೋಟೆ/ರಬಕವಿ ಬನಹಟ್ಟಿ:ಜಮಖಂಡಿ- ಕುಡಚಿ ರಾಜ್ಯ ಹೆದ್ದಾರಿಯ ನಗರದ ಪೊಲೀಸ್ ಠಾಣೆ ಪಕ್ಕದಲ್ಲಿರುವ ರಬಕವಿ ಬನಹಟ್ಟಿ ರಾಂಪುರ ಹೊಸೂರ್ ನಗರಗಳಿಗೆ ರಸ್ತೆ ಕಲ್ಪಿಸುವ ಹಾಗೂ ಅಂತರ್ ರಾಜ್ಯಗಳಿಗೆ ಸಂಪರ್ಕಿಸುವ ಏಕೈಕ ರಸ್ತೆಯಾಗಿದೆ ಮತ್ತು ಮೂರು ರಸ್ತೆ ಮಾರ್ಗಗಳಿಂದ ಸಾಕಷ್ಟು ಕಬ್ಬಿನ ಟ್ಯಾಕ್ಟರ್ ಗಳು ಲಾರಿಗಳು,ಬಸ್ ಗಳು ದ್ವಿಚಕ್ರ ವಾಹನಗಳು ಸಂಚರಿಸುವುದರ ಜೊತೆಗೆ,ಇಲ್ಲಿಯೇ ಪೂರ್ಣಪ್ರಜ್ಞೆ ಶಾಲೆ ಇರುವುದರಿಂದ ಮಕ್ಕಳ ಜೀವಗಳಿಗೆ ಕುತ್ತು ತರುವಂತಹ,ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ಯು ನಗರಸಭೆ ಹಿಂಭಾಗದ ಇಳಿಜಾರು ಪ್ರದೇಶವಾಗಿದ್ದರಿಂದ ರಸ್ತೆ ವಾಹನಗಳು ಭಾರಿ ವೇಗದಿಂದ ಬರುವುದರಿಂದ ಅಪಘಾತವಾಗುವ ಸಂಭವ ಬಹಳಷ್ಟು ಇರುತ್ತದೆ ಕಾರಣ ನಗರದ ಪೊಲೀಸ್ ಇಲಾಖೆಯ ಒಂದು ಪೋಲಿಸ್ ವೃತ್ತವನ್ನು ನಿರ್ಮಿಸುವಂತೆ ಸಂಚಾರಿಗಳ ಒತ್ತಾಯವಾಗಿದೆ.
ನೋಡಿಯೂ ನೋಡದಂತೆ ಇರುವ ಪೊಲೀಸ್ ಇಲಾಖೆ:
ನಗರದ ಪೊಲೀಸ್ ಠಾಣೆ ಪಕ್ಕದಲ್ಲಿಯೇ ಶಾಲೆಗಳು, ಸರ್ಕಾರಿ ಆಸ್ಪತ್ರೆ,ತಹಶೀಲಾರ್ ಕಚೇರಿ ಸಿವಿಲ್ ಕೋರ್ಟ್ ಹಾಗೂ ನಗರಸಭೆ ಕಚೇರಿಗಳು ಒಂದೇ ಕಡೆ ಇರುವುದರಿಂದ ಸಾರ್ವಜನಿಕರಿಗೆ ರಸ್ತೆಗಳನ್ನು ದಾಟಲಿಕ್ಕೆ ಸರಸಹಾಸ ಪಡಬೇಕಾಗುತ್ತದೆ ಈ ಹಿಂದೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ವಾಹನ ಮತ್ತು ಕಬ್ಬಿನ ಟ್ಯಾಕ್ಟರ್ ಗಳ ಅನೇಕ ಅಪಘಾತಗಳನ್ನು ಸಂಭವಿಸಿವೆ ಇನ್ನು ಮೇಲಾದರೂ ಪೊಲೀಸ್ ಇಲಾಖೆಯವರು ಎಚ್ಚೆತ್ತುಕೊಂಡು ಈ ಸ್ಥಳದಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಜಿಬ್ರಾ ಕ್ರಾಸ್ ಮಾಡುವುದರ ಜೊತೆಗೆ ಒಂದು ಪೊಲೀಸ್ ವೃತ್ತ ನಿರ್ಮಿಸಿ ಸುಗಮವಾಗಿ ವಾಹನ ಸಂಚಾರಿಗಳಿಗೆ ಸಂಚಾರವನ್ನು ಮಾಡಲು ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಹಾಗೂ ಸಂಚಾರಿಗಳ ಒತ್ತಾಯವಾಗಿದೆ.
ವರದಿ:ಮಹಿಬೂಬ್ ಎಂ ಬಾರಿಗಡ್ಡಿ