ಯಾದಗಿರಿ:ಶಹಾಪುರ ತಾಲೂಕಿನ ಸಗರ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶಂಕ್ರಮ್ಮ ಗೌಡತಿ ಅಚ್ಚಪ್ಪಗೌಡ ಸುಬೇದಾರ ಸ್ಮರಣಾರ್ಥವಾಗಿ ಜೀರ್ಣೋದ್ಧಾರಗೊಂಡ ಜೋಡಿ ಬಸವ ದೇವಸ್ಥಾನ ಅನಾವರಣ ಕಾರ್ಯಕ್ರಮ ನವಂಬರ್ 24 ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಜೀರ್ಣೋದ್ಧಾರ ದಾಸೋಹಿಗಳು ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ನಾಗನಗೌಡ ಸುಬೇದಾರ ತಿಳಿಸಿದ್ದಾರೆ.ಅಂದು ಬೆಳಗ್ಗೆ 4 ಗಂಟೆಗೆ ಗಂಗಾ ಪೂಜೆ,6 ಗಂಟೆಗೆ ಹೋಮ,9 ಗಂಟೆಗೆ ಗಣಪತಿ,ನಾಗದೇವತಾ ಹಾಗೂ ಜೋಡಿ ಬಸವ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರಗುವುದು.11:00 ಗಂಟೆಗೆ ನಾಡಿನ ಹರಗುರು ಚರಮೂರ್ತಿಗಳ ಹಾಗೂ ರಾಜಕೀಯ ಧುರೀಣರ ಸಮ್ಮುಖದಲ್ಲಿ ಧರ್ಮಸಭೆ ನೆರವೇರುವುದು.
ಜಾಲಹಳ್ಳಿಯ ಬೃಹನ್ಮಠದ ಶ್ರೀ ಜಗದಾರಾದ್ಯ ಜಯಶಾಂತ ಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ದಿವ್ಯ ಸಾನಿಧ್ಯ ವಹಿಸುವರು, ರಸ್ತಾಪುರ ಶ್ರೀಗಳಾದ ಶ್ರೀ ಗಿರಿಧರ ಶಿವಾಚಾರ್ಯರು,ಒಕ್ಕಲಿಗರ ಹಿರೇಮಠದ ಪರಮ ಪೂಜ್ಯ ಮರುಳ ಮಹಾಂತ ಶಿವಾಚಾರ್ಯರು, ಫಕೀರೇಶ್ವರ ಮಠದ ಪೂಜ್ಯ ಗುರುಪಾದ ಮಹಾಸ್ವಾಮಿಗಳು,ಶ್ರೀ ನಿಷ್ಟಿ ಕಡ್ಲಪ್ಪನವರ ವಿರಕ್ತಮಠದ ಪ್ರಭುಲಿಂಗ ಮಹಾಸ್ವಾಮಿಗಳು, ಸಿಂಧನೂರಿನ ರಂಭಾಪುರಿ ಶಾಖಾ ಮಠದ ಪೂಜ್ಯರಾದ ಸೋಮನಾಥ ಶಿವಾಚಾರ್ಯರು, ವೀರಗೋಟ್ ಪೂಜ್ಯರಾದ ಅಡವಿಲಿಂಗ ಮಹಾರಾಜರು,ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು,ಲಕ್ಷ್ಮಿಪುರ ಶ್ರೀ ಗಿರಿ ಸಂಸ್ಥಾನದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು,ಶಹಾಪುರ ಏಕದಂಡಗಿ ಮಠದ ಪರಮ ಪೂಜ್ಯರಾದ ಅಜೇಂದ್ರ ಮಹಾಸ್ವಾಮಿಗಳು, ಚರಬಸವೇಶ್ವರ ಸಂಸ್ಥಾನದ ಶ್ರೀ ಬಸವಯ್ಯ ಶರಣರು,ಅಕ್ಕಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿಯವರು ನೇತೃತ್ವದಲ್ಲಿ ಧರ್ಮಸಭೆ ಪ್ರಾರಂಭವಾಗುವುದು.
ತದನಂತರದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆಗಳ ಉದ್ದಿಮೆಗಳ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ದೇವಸ್ಥಾನ ಅನಾವರಣಗೊಳಿಸುವರು,ಸುರಪುರ ಶಾಸಕರಾದ ವೆಂಕಟಪ್ಪ ನಾಯಕ ಶಿಲನ್ಯಾಸ ನೆರವೇರಿಸುವರು,ಜೇವರ್ಗಿ ಮತಕ್ಷೇತ್ರದ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ.ಅಜಯಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸುವರು,ಕಲ್ಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳುವರು,ಯಾದಗಿರಿ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್,ತುನ್ನೂರ,ಗಣೇಶ ಮಂಟಪ ಅನಾವರಣಗೊಳಿಸುವರು,ಸಂಸದರಾದ
ರಾಜಾ ಅಮರೇಶ್ವರ ನಾಯಕ ನಾಗಮಂಟಪ ಅನಾವರಣ ಗೊಳಿಸುವರು,ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ,ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಸಾಹು ಆರಬೋಳ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಗರ ಗ್ರಾಮದ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದರ್ಶನ ಪಡೆದು ಪುನೀತರಾಗಲು ವಿನಂತಿಸಿಕೊಳ್ಳಲಾಗಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.