ಸತತ ಮತ್ತು ಕಠಿಣ ಪರಿಶ್ರಮ ಮಾಡಬೇಕು
:ಬಾಬುಸಾಬ್: ಪಟುವಿಗೆ ಕಿವಿ ಮಾತು
ಗಂಗಾವತಿ:- ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲೆಯ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಶಾಲೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗಂಗಾವತಿ ತಾಲೂಕಿನ ಬಸಾಪಟ್ಟಣದ ಗ್ರಾಮೀಣ ಕ್ರೀಡಾಪಟು ಅನುಷಾ 17 ರ ವಯೋಮಿತಿಯ -40 ಕೆ ಜಿ ಕುಮಿಟೆ (ಫೈಟ್) ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿ ತೃತೀಯ ಸ್ಥಾನದೊಂದಿಗೆ ಪ್ರಮಾಣ ಪತ್ರ ಮತ್ತು ಕಂಚಿನ ಪದಕಕ್ಕೆ ಕೊರಳೋಡ್ಡಿದ್ದಾರೆ ಎಂದು ಮುಖ್ಯ ತರಬೇತಿದಾರರಾದ ಬಾಬುಸಾಬ್ ತಿಳಿಸಿರುತ್ತಾರೆ.
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗೆ ಅಭಿನಂದಿಸಿ ಮತ್ತು ಕ್ರೀಡಾಪಟುವಿಗೆ ತೃತೀಯ ಸ್ಥಾನವೇ ತೃಪ್ತಿ ಅಲ್ಲ ಈ ಸ್ಥಾನ ಇನ್ನು ಹೆಚ್ಚಿನ ಕಠಿಣ ಪರಿಶ್ರಮವನ್ನು ಮಾಡಬೇಕು ಎಂಬುದರ ಸೂಚನೆ ಹಾಗಾಗಿ ಮುಂದಿನ ಪ್ರಥಮ ಸ್ಥಾನಕ್ಕೆ ಹೆಚ್ಚಿನ ಮಟ್ಟದಲ್ಲಿ ಅಭ್ಯಾಸವನ್ನು ಮಾಡುವುದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಬೇಕು ಎಂದು ಬಾಬುಸಾಬ್ ರವರು ಕ್ರೀಡಾಪಟುವಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ತರಬೇತುದಾರರಾದ ಅಂಬಿ ನಾಯಕ ಪಾಲಕರಾದ ಮಂಜುನಾಥ್ ಕಾತರಕಿ ಮತ್ತು ಇನ್ನಿತರರಿದ್ದರು.