ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಯಾದಗಿರಿ ಜಿಲ್ಲೆಯಲ್ಲೆ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದು ಉತ್ತಮವಾದ ವ್ಯಾಪಾರ ವಹಿವಾಟು ನಡೆತಕ್ಕಂತ ದೊಡ್ಡ ಮಾರುಕಟ್ಟೆಗೆ ಸೂಕ್ತವಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಲ್ಲದೆ ಇರುವುದರಿಂದ ಇಲ್ಲಿಯ ಅಧಿಕಾರಿಗಳು,ಸಿಬ್ಬಂದಿಗಳು, ಅಧ್ಯಕ್ಷರುಗಳು ಆಡಿದ್ದೇ ಆಟ
ಇವರುಗಳು ಮಾಡಿದ್ದೆ ಕಾನೂನು.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದ ಹಾಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯಾಪ್ತಿಯಲ್ಲಿ ಬರುವ ಹಸನಾಪುರ, ಖಾನಾಪುರ ಎಸ್.ಎಚ್.ಮಾರುಕಟ್ಟೆ ಹೊಂದಿದ್ದು ಹಾಗೂ ಹುಣಸಗಿ ಮತ್ತು ಕೆಂಭಾವಿ ಉಪ ಮಾರುಕಟ್ಟೆ ಹೊಂದಿದ್ದು ಖಾನಾಪುರ ಎಸ್.ಎಚ್ ನಲ್ಲಿ ಒಟ್ಟು ಚಿಕ್ಕಮಳಿಗೆಗಳು 20 ರೈತರ ಭವನ 100 ಎಮ್.ಟನ್ 100 ಎಮ್.ಎನ್.ಗೋದಾಮುಗಳನ್ನು ಹಾಗೂ ಹಸನಾಪುರದಲ್ಲಿ ಒಟ್ಟು 10 ಚಿಕ್ಕಮಳಿಗೆಗಳು ಹುಣಸಗಿಯಲ್ಲಿ ಒಟ್ಟು 19 ಗೋದಾಮುಗಳು ಕೆಂಭಾವಿಯಲ್ಲಿ 4 ಗೋದಾಮುಗಳನ್ನು ನಿಯಮಾನುಸಾರವಾಗಿ ಟೆಂಡರ್ ಪೇಟೆ ಕಾರ್ಯಕರ್ತರಿಗೆ ಹಂಚಿಕೆ ಮಾಡಬೇಕು.
ಆದರೆ ಇಲ್ಲಿನ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ಇಲ್ಲದೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಹಂತದಲ್ಲಿಯೇ ತಮಗೆ ಹಣ ನೀಡಿದವರಿಗೆ ಅಂಗಡಿ ಚಿಕ್ಕ ಮಳಿಗೆಗಳನ್ನು ಅನಧಿಕೃತವಾಗಿ ಬಾಡಿಗೆ ನೀಡಿ ತಮ್ಮ ಸ್ವಂತಕ್ಕಾಗಿ ಹಣ ಬಳಸಿಕೊಳ್ಳುತ್ತಿದ್ದಾರೆ ಎಂದು ದಲಿತ ಸೇನೆ ಸುರಪುರ ತಾಲೂಕು ಅಧ್ಯಕ್ಷ ಮರಿಲಿಂಗ ಗುಡಿಮನಿ ಅಧಿಕಾರಿಗಳ ವಿರುದ್ಧ ಗಂಭೀರವಾದ ಆರೋಪವನ್ನು ಮಾಡುವ ಮೂಲಕ ಪತ್ರಿಕಾ ಹೇಳಿಕೆ ನೀಡಿದರು.
ಹಸನಾಪುರ,ಖಾನಾಪುರ ಎಸ್.ಎಚ್.,ಉಪ ಮಾರುಕಟ್ಟೆಗಳಾದ ಹುಣಸಗಿ,ಕೆಂಭಾವಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬರುವ ಚಿಕ್ಕಮಳಿಗೆಗಳು,ಗೋದಾಮುಗಳನ್ನು ಅಧಿಕೃತವಾಗಿ ಟೆಂಡರ್ ಕರೆದು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ದ ಕಾನೂನಿನ ಪ್ರಕಾರ ಕೈಗೊಂಡು ಸೇವೆಯಿಂದ ವಜಾಗೊಳಿಸಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಕೃಷಿ ಉಪ ನಿರ್ದೇಶಕರು ಕೃಷಿ ಮಾರುಕಟ್ಟೆ ಇಲಾಖೆ ಬೆಂಗಳೂರು ಅವರಿಗೆ ಬರೆದ ಮನವಿಪತ್ರವನ್ನು ಸುರಪುರ ತಹಸೀಲ್ದಾರ ಮೂಲಕ ಮನವಿಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ದಲಿತ ಸೇನೆ ತಾಲೂಕು ಅಧ್ಯಕ್ಷ ಮರಿಲಿಂಗ ಗುಡಿಮನಿ,ಜಿಲ್ಲಾ ಉಪಾಧ್ಯಕ್ಷ ಹುಲಗಪ್ಪ ದೇವತ್ಕಲ್,ತಾಲೂಕು ಉಪಾಧ್ಯಕ್ಷ ಮಹಾದೇವ ದೇವಾಪುರ,ಬಸವರಾಜ ಮಂಗಳೂರು,ತೇಜು ಹೊಸಮನಿ,ಪರಶುರಾಮ ಬೋನಾಳ,ಸಂತೊಇಷ ಜೈನಾಪುರ ಇತರರು ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.