ಬಾಗಲಕೋಟೆ/ರಬಕವಿ ಬನಹಟ್ಟಿ:ಜಿಲ್ಲಾ ಸಾಕ್ಷರತಾ ಹಾಗೂ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಜಮಖಂಡಿ ಇವರ ಅಡಿಯಲ್ಲಿ ಸನ್ 2022-23 ನೇ ಸಾಲಿನ ವಿವೇಕ್ ಶಾಲಾ ಕೊಠಡಿಯು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಿಲಾಲ್ ಮಜೀದ ಹತ್ತಿರ ಇರುವ ಸರಕಾರಿ ಮಾದರಿ ಉರ್ದು ಪ್ರಾಥಮಿಕ ಶಾಲೆ ನಂಬರ್ 2 ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು.ನಂತರ ಮಾತನಾಡಿದ ಶಾಸಕ ಸಿದ್ದು ಸವದಿ ಈ ಶಾಲೆಯ ಎಲ್ಲಾ ಮುಖಂಡರುಗಳು ಈ ಭಾಗದ ಮುಖಂಡರುಗಳು ಕೂಡಿ ಒಂದು ಮಜ್ಬೂತ್ ಕಟ್ಟಡ ನಿರ್ಮಿಸಿದ್ದೀರಿ ಎಂದು ಹೇಳುವುದರ ಮೂಲಕ ವಂದನೆಗಳನ್ನು ಸಲ್ಲಿಸಿದರು ಮತ್ತು ನಾವು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಡಬೇಕು ಏಕೆಂದರೆ ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ನೋಡಿ ಶಾಸಕರು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಶಿಕ್ಷಣವಿಲ್ಲದೆ ಏನೂ ಇಲ್ಲ ಕಣ್ಣಿದ್ದು ಕುರುಡನಂತೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಹಳ ವರ್ಷಗಳ ಅಪಾರ ಸೇವೆಯನ್ನು ಗುರುತಿಸಿ ಜಾಕೀರ್ ಹುಸೇನ್ ಇಂಡಿಕರ್ ಸರ್ ಅವರಿಗೆ ಸನ್ಮಾನ ಮಾಡಿದರು .
ಈ ಸಂದರ್ಭದಲ್ಲಿ ಜಮಖಂಡಿ ತಾಲೂಕ ಶಿಕ್ಷಣ ಸಮನ್ವಯ ಅಧಿಕಾರಿ ಅವಟಿ ಸರ್ ಹಾಗೂ ಶಿಕ್ಷಣ ಸಂಯೋಜಕರಾದ ಭಜಂತ್ರಿ ಸರ್ ಮತ್ತು ಹಳಂಗಳಿ ಸರ್ ಹಾಗೂ ಉರ್ದು ಸಿ ಆರ್ ಪಿ ಬಾಗೇವಾಡಿ ಸರ್ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಯೂಸೂಫ್ ಮಹಾಲಿಂಗಪುರ್ ಅಂಜುಮನ್ ಅಧ್ಯಕ್ಷ ಬುಡನ್ ಜಮಾದಾರ್ ಡಾಕ್ಟರ್ ಅಕ್ಬರ್ ತಾಂಬೋಳಿ, ಅಶೋಕ್ ರಾವಲ್,ಪ್ರವೀಣ್ ದಬಾಡಿ,ಫಿರೋಜ್ ಅಕಾತಿ ಮಲಿಕ್ ಜಾಕೀರ್ ಬಾರಿಗಡ್ಡಿ , ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿ ಬ್ಯಾಂಕಿನ ಅಧ್ಯಕ್ಷ ಇರ್ಶಾದ್ ಮೊಮಿನ,ಮಾಜಿ ನಗರಸಭಾ ಸದಸ್ಯ ನಸೀಮ ಮೊಕಾಶಿ,ಹುಸೇಫ ಮುಲ್ಲಾ,ಜಾಕೀರ್ ಬಾರಿಗಡ್ಡಿ,ಹಸನ್ ಸಾಬ್ ಮುಲ್ಲಾ,ಗುಲಾಬ್ ಸಾಬ್ ಯಾದವಾಡ,ಶಾಲಾ ಸುಧಾರಣಾ ಸಮಿತಿಯ ಸದಸ್ಯರುಗಳು ಇನ್ನೂ ಅನೇಕ ಮುಖಂಡರುಗಳು ಹಾಗೂ ಶಾಲಾ ಶಿಕ್ಷಕ-ಶಿಕ್ಷಕರು ಉಪಸ್ಥಿತರಿದ್ದರು.
ವರದಿ:ಮಹಿಬೂಬ್ ಎಂ ಬಾರಿಗಡ್ಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ