ಮೈಸೂರು:ನಂಜನಗೂಡಿನಲ್ಲಿರುವ ಅನುರಾಗ್ ಟ್ರಸ್ಟ್ ಮಕ್ಕಳಮನೆಯ ವಿದ್ಯಾಥಿ೯ಗಳಿಗೆ ಲಿಂಗದೀಕ್ಷೆ ನೀಡಿ ಸಹಜ ಶಿವಯೋಗದ ಬಗ್ಗೆ ಅರಿವು ನೀಡಿದ ನರಸಿಂಹರಾಜಪುರ ಬಸವಕೇಂದ್ರದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಇಷ್ಠಲಿಂಗ ಜಾತಿಯ ಸಂಕೇತವಲ್ಲ ಅದು ಅರಿವು,ಆಚಾರ,ಅನುಭಾವದ ಸಂಕೇತ ಪ್ರತಿ ನಿತ್ಯದ ಜೀವನದಲ್ಲಿ ಬಸವಾದಿ ಶರಣರ ಬದುಕಿನ ಮಾಗ೯ವನ್ನು ಅಳವಡಿಸಿಕೊಂಡು ಬದುಕಬೇಕು ದೇವರನೊಲಿಸಲು ಹಾಲಿನಬೀಷೇಕ, ತುಪ್ಪ,ಮೊಸರು,ಗಂಜಲು,ಬಂಡಿ ಬಂಡಿ ಪತ್ರೆ ಹಾಕುವ,ಹರಕೆಗಳ ಅವಶ್ಯಕತೆಯಿಲ್ಲ ನಿಷ್ಕಲ್ಮಷ ಮನಸ್ಸಿನ ಭಕ್ತಿ ಸಾಕು ವಿದ್ಯಾಥಿ೯ಗಳು ಮೂಢನಂಬಿಕೆಯಿಂದ ದೂರವಿರಬೇಕು ವೈಜ್ಞಾನಿಕ ಚಿಂತನೆ ಮಾಡಬೇಕು.ಮದ್ಯಪಾನ,ಧೂಮಪಾನ, ತಂಬಾಕು,ಮಾದಕವಸ್ತು ಸೇವನೆ ಮಾಡಬಾರದು.ದ್ವೇಷ,ಅಸೂಯೆ,ದುರಾಸೆ, ದುನ೯ಡತೆ,ದುರಾಭ್ಯಾಸಗಳನ್ನು ಮೆಟ್ಟಿನಿಂತು ವಿಶ್ವಗುರು ಬಸವಣ್ಣನವರು ನೀಡಿದ ಲಿಂಗಾಚಾರ,ಶಿವಾಚಾರ,ಸದಾಚಾರ,ಭೃತ್ಯಾಚಾರ, ಗಣಾಚಾರವನ್ನು ಅಳವಡಿಸಿಕೊಂಡು ಬಸವಾದಿ ಶರಣರ ವಚನಗಳ ಮಾಗ೯ದಲ್ಲಿ ನಡೆಯಬೇಕು ಎಂದು ಹೇಳಿದರು ಅಧ್ಯಕ್ಷರಾದ ಸೋಮಶೇಖರ್ ಮಾತಾನಾಡಿ ದೇವರು ನಮ್ಮೊಳಗೆ ಇದ್ದಾನೆ.ಎಲ್ಲೂ ಸುತ್ತುವ ಅವಶ್ಯಕತೆ ಇಲ್ಲ ಕಾಯಕ ದಾಸೋಹ ಇಷ್ಠಲಿಂಗಯೋಗದ ಮುಖಾಂತರ ದೇವರನ್ನು ಅನುಭಾವಿಸಬಹುದು ವಿದ್ಯಾಥಿ೯ಗಳು ಶಿಸ್ತು ಸೇವೆ ರೂಢಿಸಿಕೊಂಡರೆ ಉಜ್ವಲ ವ್ಯಕ್ತಿಗಳಾಗಬಹುದು ಎಂದರು ಮಕ್ಕಳ ಮನೆಯ ವಿದ್ಯಾಥಿ೯ಗಳು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.