ಯಾದಗಿರಿ:ಜಿಲ್ಲಾ ಆಮ್ ಆದ್ಮಿ ಪಾರ್ಟಿ 04/12/2023 ರಂದು ಅಂದರೆ 2023-24 ರ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿ ಬೆಳೆಗಳು ಮಳೆ ಇಲ್ಲದೆ ಸಂಪೂರ್ಣ ಹಾಳಾಗಿದ್ದು ರೈತರು ಹಾಕಿದ ಗೊಬ್ಬರ ಹಾಕಿ ರೈತರು ಅಲ್ಲಿ ಇಲ್ಲಿ ಸಾಲ ಮಾಡಿ ಬೆಳೆಗಳು ಹಾಳಾಗಿದ್ದು ಅಲ್ಲದೆ ಒಂದು ನೈಯಾ ಪೈಸೆ ಉತ್ಪನ್ನವಿಲ್ಲದೆ ರೈತರು ಕಂಗಾಲಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹತ್ತಿ, ಭತ್ತ, ಮೆಣಸಿನಕಾಯಿ,ತೊಗರಿ,ಹೆಸರು,ಬೆಳೆಗಳು ಸಂಪೂರ್ಣ ನಾಶವಾಗಿವೆ ಜಿಲ್ಲೆಯ ರೈತರು ಪರಿಸ್ಥಿತಿ ಕೇಳಬೇಕಾದ ಸರ್ಕಾರಗಳು ನಿದ್ದೆ ಮಾಡುತ್ತಿವೆ ಎಂದು ಈ ಭಾಗದ ರೈತರು ಕಣ್ಣಿರು ಹಾಕುತ್ತಿದ್ದಾರೆ.
ಬೇಕಾ ಬಿಟ್ಟಿಯಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಎಸ್.ಡಿ.ಆರ್ ಮತ್ತು ಎನ್.ಎನ್.ಡಿ ಜಂಟಿ ವರದಿಯನ್ವಯ ಬರಗಾಲ ಎಂದು ಘೋಷಿಸಿತು ಆದರೆ ಯಾವ ಒಂದು ಸರ್ಕಾರಗಳು ಇಲ್ಲಿವರೆಗೆ ಒಂದು ರೂಪಾಯಿ ಕೊಟ್ಟಿಲ್ಲ ಸರ್ ಎಂದು ತಮ್ಮ ನೋವು ಹಂಚಿಕೊಂಡರು.
ಅಲ್ಲದೆ ಪಿ.ಎಂ.ಕಿಸಾನ್ ಅಡಿಯಲ್ಲಿ 4000/- ರೂಪಾಯಿ ಪ್ರೋತ್ಸಾಹಧನ,ರೈತ ವಿದ್ಯಾನಿಧಿ,ರೈತರ ಮಕ್ಕಳ ಸ್ಕಾಲರ್ ಶಿಪ್ ಬಂದ್ ಮಾಡಿದೆ ರೈತರ ಹೊಲಗಳಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಯಾದಗಿರಿ ಜಿಲ್ಲೆಯ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವೆಂಕಟೇಶ್ ಭಕ್ತಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ವರದಿ-ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.