ಉತ್ತರ ಕನ್ನಡ/ಮುಂಡಗೋಡ ತಾಲೂಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಸೈಯದ್ ಮಹಮ್ಮದ್ ಗೌಸ್ ಸಾಕಿನ್ ಗುಂಜಾವತಿ ನಿವಾಸಿ ಇವರು ಮೃತಪಟ್ಟಿರುತ್ತಾರೆ.ಮೃತ ರೋಗಿ ಗಳಾದ ಸೈಯದ್ ಮಹಮ್ಮದ್ ಗೌಸ್ ಮನೆಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ|ನಟರಾಜ್,ಜಿಲ್ಲಾ ಆರ್ ಸಿ ಏಚ್ ಅಧಿಕಾರಿಗಳು, ಡಾಕ್ಟರ್ ಅರ್ಚನಾ ನಾಯಕ್ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು,ಡಾಕ್ಟರ್ ನರೇಂದ್ರ ಪವಾರ್ ತಾಲೂಕ ಆಡಳಿತ ವೈದ್ಯಾಧಿಕಾರಿಗಳು. ಮುಂಡಗೋಡ ಹಾಗೂ ಡಾಕ್ಟರ್ ಭರತ ಹಾಗೂ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳು ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ನೀಡಿರುತ್ತಾರೆ.
ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿಗಳ ಮುಷ್ಕರ ದಿಂದ ರೋಗಿಗಳು ತೊಂದರೆ ಪಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
