ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸಿವೆ ಹಳ್ಳಿ ಒಂದನೇ ಹೋಬಳಿ ಸದಾಶಿವಪುರ ಗ್ರಾಮದಲ್ಲಿ ಸ್ಮಶಾನ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು.
ಇದರಿಂದ ಗ್ರಾಮದಲ್ಲಿ ಶವಸಂಸ್ಕಾರ ಮಾಡಲು ಸಾಧ್ಯವಾಗದ ಕಾರಣ ನಿನ್ನೆ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದರು ಇದರಿಂದ ಗ್ರಾಮಸ್ಥರು ಹೊನ್ನಾಳಿ ತಾಲೂಕು ದಂಡಾಧಿಕಾರಿ ರಾಜೂಗೌಡ ರನ್ನು ಭೇಟಿ ಮಾಡಿ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿ ಶವಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು
ನಂತರ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಮಂಡಳಿ ಕಂದಾಯ ಇಲಾಖೆ,ಗ್ರಾಮ ಲೆಕ್ಕಾಧಿಕಾರಿ, ಮತ್ತು ಸರ್ವೇ ಇಲಾಖೆ ಉಪ ತಹಶೀಲ್ದಾರ್,ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ
ಸದಾಶಿವಪುರ ಗ್ರಾಮದಲ್ಲಿ ಸರ್ವೆ ನಂಬರ್ 87ರಲ್ಲಿ ಸ್ಮಶಾನಕ್ಕೆ ನಿಗದಿಯಾದ ಜಾಗದಲ್ಲಿ ಒತ್ತುವರಿ ತೆರವುಗೊಳಿಸಿ ಶವಸಂಸ್ಕಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.ಇದೊಂದು ಗ್ರಾಮದಲ್ಲಿರುವ ಸಮಸ್ಯೆ ಅಲ್ಲ ಸ್ಮಶಾನ ಭೂಮಿ ಮತ್ತು ಜಾನುವಾರುಗಳಿಗೆ ಮೀಸಲು ಇಟ್ಟ ಭೂಮಿ ಪರರ ಪಾಲಾಗಿದೆ ಇಂತಹ ಭೂಮಿಗಳನ್ನು ಉಳಿಸುವ ಕೆಲಸವನ್ನು ಮಾನ್ಯ ತಾಲೂಕು ದಂಡಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ.
ವರದಿ-ಪ್ರಭಾಕರ ಡಿ ಎಂ ಹೊನ್ನಾಳಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.