ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆಯ ಅಂಬಾರಿಯನ್ನು ಸುಮಾರು ಎಂಟು ಬಾರಿ ಹೊತ್ತು ಎಲ್ಲರ ಮನದಲ್ಲಿ ಉಳಿದಿರುವ ಕ್ಯಾಪ್ಟನ್ ಅರ್ಜುನ ಆನೆಯನ್ನು ಕಳೆದುಕೊಂಡಿರುವುದು ನಾಡಿನ ದುರದೃಷ್ಟ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.
ಅರ್ಜುನ ಆನೆ ಸಾವಿಗೆ ಅರಣ್ಯ ಇಲಾಖೆಯ ವೈಫಲ್ಯವೇ ಕಾರಣ ಎಂದುತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ.
ಕಾಡಾನೆಯನ್ನು ಪಳಗಿಸಲು
ವಯಸ್ಸಾದ ಹಾಗೂ ಅಂಬಾರಿ ಹೊರುವ ಅರ್ಜುನನನ್ನು ಅರಣ್ಯಧಿಕಾರಿಗಳು ಉಪಯೋಗಿಸಿಕೊಂಡಿದ್ದು ಕಾನೂನಿನ ಪ್ರಕಾರ ಅಪರಾಧ ಎಂದಿದ್ದಾರೆ.
ಒಂಟಿಸಲಗವನ್ನು ಪಳಗಿಸಲು ಸೂಕ್ತವಾದ ಆನೆಗಳನ್ನು ಬಳಸಿಕೊಳ್ಳಬೇಕಿತ್ತು,ಮನುಷ್ಯನ ಜೀವದಷ್ಟೇ ಪ್ರಾಣಿಗಳ ಜೀವವೂ ಅಮೂಲ್ಯವಾದದ್ದು ಎಂಬುದನ್ನು ಇನ್ನಾದರೂ ಅಧಿಕಾರಿಗಳು ತಿಳಿಯಬೇಕು ಎಂದು ಹೇಳಿದ್ದಾರೆ.
ಸೂಕ್ತ ತನಿಖೆ ಮಾಡಿ ಆನೆ ಅರ್ಜುನನ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ದ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ಒತ್ತಾಯಿಸಿದ್ದಾರೆ.
ಆನೆ ಕಳೆದುಕೊಂಡ ಮಾವುತರಿಗೆ ನೋವು ತಡೆದುಕೊಳ್ಳುವ ಶಕ್ತಿ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಎಂಟು ಭಾರಿ ಅಂಬಾರಿ ಹೊತ್ತ ಮೈಸೂರು ದಸರಾ ಆಕರ್ಷಣೆಯ ಅರ್ಜುನ ಮತ್ತೆ ಕರ್ನಾಟಕದಲ್ಲೆ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ತೇಜಸ್ವಿ ನಾಗಲಿಂಗಸ್ವಾಮಿ ಪ್ರಾರ್ಥಿಸಿದ್ದಾರೆ.