ಕಲಬುರಗಿ:ಬರಗಾಲದ ಹೊಡೆತದಿಂದ ತತ್ತರಿಸಿರುವ ರೈತರಿಗೆ ಕಲ್ಬುರ್ಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ನವರು ಜೇವರ್ಗಿ ತಾಲೂಕಿನ ಹಾಗೂ ಯಡ್ರಾಮಿ ತಾಲೂಕಿನ ರೈತರಿಗೆ ಧೀರ್ಘಾವಧಿಯ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡಿ ಗಾಯದ ಮೇಲೆ ಬರೆ ಹಾಕಿದಂತೆ ಹೊಡೆತ ಕೊಟ್ಟಿದ್ದು ಮುಗ್ಧ ರೈತರಿಗೆ ನುಂಗಲಾರದ ತುತ್ತಾಗಿದೆ ಯಾಕೆಂದರೆ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಇದುವರೆಗೂ ಕರ್ನಾಟಕ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕಾಗಿತ್ತು ರೈತರ ಸಾಲ ಮನ್ನಾ ಮಾಡದೆ ಸರ್ಕಾರ ರೈತರ ಭವಿಷ್ಯದ ಜೊತೆ ಚೆಲ್ಲಾಟ ವಾಡುತ್ತಿರುವಂತೆ ಭಾಸವಾಗುತ್ತಿದೆ ಯಾಕೆಂದರೆ ಜೇವರ್ಗಿ ತಾಲೂಕಿನ 40ಕ್ಕೂ ಹೆಚ್ಚು ರೈತರ ಮೇಲೆ ಕಲ್ಬುರ್ಗಿಯ ಡಿಸಿಸಿ ಬ್ಯಾಂಕ್ ನಿಂದ ex/48/2023 ಅಡಿಯಲ್ಲಿ ಜೇರಟಗಿ ಗ್ರಾಮದ ರೈತರಿಗೆ ಹಾಗೂ ನೆಲೋಗಿ ಮತ್ತು ಕೂಡಲಗಿ ಹಾಗೂ ಅಂಬರಕೇಡ ಮತ್ತು ಬಳಬಟ್ಟಿ ಮತ್ತು ಬಿಳವಾರ ಇಜೇರಿ ಗ್ರಾಮದ ರೈತರಿಗೆ ದಿನಾಂಕ 6/1/2024 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಬರಗಾಲದ ಹೊಡೆತದಿಂದ ರೈತರು ಈಗಾಗಲೇ ಕಂಗೆಟ್ಟು ಹೋಗಿದ್ದಾರೆ ಅಲ್ಲದೆ ಡಿಸಿಸಿ ಬ್ಯಾಂಕಿನ ನೋಟಿಸ್ ಬಂದದ್ದು ನೋಡಿ ತಾಲೂಕಿನ ರೈತರು ದಿಕ್ಕು ತೋಚದೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ ಈ ವಿಷಯದ ಕುರಿತು ತಾಲೂಕಿನ ಜನಪ್ರತಿನಿಧಿಗಳಾದ ಡಾ.ಅಜಯ್ ಸಿಂಗ್ ಅವರು ವಿಧಾನಸಭೆಯ ಕಲಾಪದಲ್ಲಿ ಈ ವಿಷಯದ ಕುರಿತು ಹಾಗೂ ರೈತರ ಸಾಲ ಮನ್ನಾ ಕುರಿತು ಸದನದಲ್ಲಿ ಧ್ವನಿ ಎತ್ತಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯಾಧ್ಯಕ್ಷರಾದ ಚನ್ನಯ್ಯ ಸ್ವಾಮಿ ವಸ್ತ್ರದ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ ಅಷ್ಟೇ ಅಲ್ಲದೆ ಶೀಘ್ರದಲ್ಲಿಯೇ ತಾಲೂಕಿನಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ರೈತರ ಪರವಾಗಿ ಸರ್ಕಾರದ ಗಮನಕ್ಕೆ ತಂದೆ ತರುತ್ತೇವೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಾಡಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಸರ್ಕಾರದ ಬೆಳೆ ಪರಿಹಾರ ಧನದಿಂದ ನಮ್ಮ ನಾಡಿನ ರೈತರಿಗೆ ಯಾವುದೇ ರೀತಿಯಿಂದ ಅನುಕೂಲವಾಗಿಲ್ಲ ಕೂಡಲೇ ನಾಡಿನ ರೈತರ ಸಂಪೂರ್ಣ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯಧ್ಯಕ್ಷರಾದ ಚನ್ನಯ್ಯ ಸ್ವಾಮಿ ವಸ್ತ್ರದ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.