ಯಾದಗಿರಿ:ಜಿಲ್ಲಾ ಪಂಚಾಯಿತಿ ಅಧಿಕಾರಿಗಳೇ ಸ್ವಲ್ಪ ಇತ್ತ ಕಡೆ ಗಮನ ಹರಿಸಿ ಇನ್ನೂ ನಿದ್ದೆಯಲ್ಲಿ ಇದ್ದೀರಾ ಕಣ್ಣು ಬಿಟ್ಟು ನೋಡಿ ಶಹಾಪುರ ತಾಲೂಕಿನ ಖಾನಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಕರ್ಮ ಕಾಂಡವನ್ನು ನೋಡಿ ನಿಮ್ಮ ಪಂಚಾಯಿತಿ ಅಧಿಕಾರಿಗಳೇ ಕಮಿಶನ್ ಕೊಡದಿದ್ದರೆ ಕೆಲಸ ಮಾಡಲ್ಲವಂತೆ ನಿಮ್ಮ ಅಧಿಕಾರಿಗಳ ಮಾಡುತ್ತಿರುವ ಅವ್ಯವಹಾರ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕಾರ್ಮಿಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮಲ್ಲಿಕಾರ್ಜುನ.ಎಸ್.ಮೇಟಿ ಯಾದಗಿರಿ ಅವರಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ಮಲ್ಲಿಕಾರ್ಜುನ.ಎಸ್.ಮೇಟಿ ಅವರು ಶಹಾಪುರ ತಾಲೂಕಿನ ಖಾನಾಪುರ ಗ್ರಾಮ ಪಂಚಾಯಿತಿ 2021-23 ನೇ ಸಾಲಿನ ಡಾ||ಬಿ.ಆರ್. ಅಂಬೇಡ್ಕರ್ 20 ಮನೆಗಳು,ಬಸವ ವಸತಿ ಯೋಜನೆ ಅಡಿಯಲ್ಲಿ 62 ರಿಂದ 82 ಮನೆಗಳು ಬಂದಿವೆ ಖಾನಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ವಾರ್ಡ್ ಸಭೆ ಹಾಗೂ ಗ್ರಾಮಸಭೆ ನಡಸದೆ ಇರುವುದು ನೋಡಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ತಮ್ಮ ತಮ್ಮ ಕುಟುಂಬಸ್ಥರಿಗೆ ಹಾಗೂ ಅನುಕೂಲಸ್ಥರಿಗೆ ತಮ್ಮಗೆ ಬೇಕಾದವರಿಗೆ ಆಯ್ಕೆ ಮಾಡಿ ಅನುಮೋದನೆ ಕಳಿಸಿದ್ದು ಅದರ ಬೆನ್ನಲ್ಲೇ ಜಿ.ಪಿ.ಎಸ್ ಕೂಡಾ ಮಾಡಿದ್ದಾರೆ. ಅನುಮೋದನಗೆ ಕಳಿಸಿದ ಕಾಪಿ ಸರಿಯಾಗಿ ಪರಿಶೀಲನೆ ಮಾಡಬೇಕು ಮತ್ತು ತಾವುಗಳು ಸರಿಯಾಗಿ ಪರಿಶೀಲನೆ ಅದರ ಮಾಹಿತಿ ಪಡೆದುಕೊಂಡು ಅನುಮೋದನೆ ನೀಡಿದೆ ಕೂಡಲೇ ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ್ದರು.
ಕಾನೂನು ಪ್ರಕಾರ ಮನೆ ಇಲ್ಲದವರಿಗೆ ಮತ್ತು ಬಡವರಿಗೆ ಬಂದ ಮನೆಗಳು ಗ್ರಾಮಸ್ಥರಲ್ಲಿ ಒಬ್ಬ ರಿಂದ 30,000/- ರೂಪಾಯಿ ಹಣ ಪಡೆದುಕೊಂಡು ಮನೆ ನೀಡಿದ್ದು ಒಟ್ಟು 82 ಮನೆಗಳು ರಾತ್ರೋರಾತ್ರಿ ಜಿ.ಪಿ.ಎಸ್ ಮಾಡಿದ್ದು ಅಲ್ಲದೆ ಪಂಚಾಯಿತಿಯಲ್ಲಿ ಆದ ಭಾರೀ ಅವ್ಯವಹಾರ ನಡಿಸಿದ್ದು ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಬಡ ಕೂಲಿ ಕಾರ್ಮಿಕರು ಕಾರ್ಯ ನಿರ್ವಹಿಸಿದ್ದು ಅವರಿಗೆ ಬಳಸುವ ಸಾಮಾಗ್ರಿಗಳು ಖರೀದಿಸಿದೆ ಬಂದು ಹಣ 5,20,000/- ರೂಪಾಯಿ ಹಣವನ್ನು ಅಧ್ಯಕ್ಷರು, ಪಿಡಿಒ,ಕಂಪ್ಯೂಟರ್ ಆಪರೇಟರ್ ಎಲ್ಲರೂ ಸೇರಿ ಗ್ರಾಮ ಪಂಚಾಯಿತಿ ಹಣ ಲಪಟಾಯಿಸಿದ್ದಾರೆ. ಕಂಪ್ಯೂಟರ್ ಆಪರೇಟರ್ ಅವರ ಮಾವ ಸಿದ್ದಲಿಂಗಪ್ಪ ಯಾದಗಿರಿಕರ್ ಗುತ್ತೇದಾರರ 29ADYPY3585H2ZA ಖಾತೆಗೆ ಹಣ ಜಮಾ ಮಾಡಿಸುತ್ತಾರೆ ಇಲ್ಲಿವರೆಗೆ ಅಂದರೆ 9 ವರ್ಷದಿಂದ ಒಂದೇ ಖಾತೆಗೆ ಹಣ ಜಮಾ ಮಾಡಿದ್ದು ಭಾರಿ ಗೋಲ್ ಮಾಲ್ ಮಾಡಿರುವ ಕಂಪ್ಯೂಟರ್ ಕೋಟಿ ಕೋಟಿ ಹಣ ಲೂಟಿ ಮಾಡಿರುತ್ತಾರೆ ಸದರಿ ಗುತ್ತಿಗೆದಾರ ಲೈಸೆನ್ಸ್ ರದ್ದುಪಡಿಸಿ ಗುತ್ತಿಗೆದಾರನ ಹೆಸರು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
15 ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳದೆ 7.20 ಲಕ್ಷ ರೂಪಾಯಿ ಹಣ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಕಂಪ್ಯೂಟರ್ ಆಪರೇಟರ್ ಹಾಗೂ ಅಧ್ಯಕ್ಷರು ಸೇರಿ ಬಾರಿ ಮೊತ್ತದ ಲೂಟಿ ಮಾಡಿದ್ದಾರೆ.2009 ರಲ್ಲಿ ನೇಮಕಗೊಂಡ ಪಂಪ- ಆಪರೇಟರ್ ಮುಂಬಡ್ತಿ ನೀಡಿದೆ ಅನಧಿಕೃತವಾಗಿ ತಂದೆ ಜೀವಂತವಾಗಿದ್ದರೂ ಅನುಕಂಪ ಆಧಾರದ ಮೇಲೆ ಮಕ್ಕಳಿಗೆ ಕೆಲಸಕ್ಕೆ ತೆಗೆದುಕೊಂಡು 2017-18 ರಲ್ಲಿ ಮತ್ತೆ ತೆಗೆದುಕೊಂಡು ಅವರಿಗೆ ಪಂಪ್ ಆಪರೇಟರ್ ಹುದ್ದೆಯಿಂದ ಬಿಲ್ ಕಲೆಕ್ಟರ್ ಹುದ್ದೆಗೆ ಮುಂಬಡ್ತಿ ನೀಡಿದ್ದು ಅಲ್ಲದೆ ಸಿನಿ ಯರಿಟಿ ಪ್ರಕಾರ ಹಿರಿಯರಿಗೆ ಅಂದರೆ ಅನುಭವ ಹೊಂದಿರುವವರಿಗೆ ಹುದ್ದೆ ನೀಡಬೇಕು ಆದರೆ ಇಲ್ಲಿನ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಅಧ್ಯಕ್ಷ ಇಬ್ಬರು ಸೇರಿ ಲಂಚ ತೆಗೆದುಕೊಂಡು ಮತ್ತು ಕಾನೂನು ಬಾಹಿರವಾಗಿ ಚಟುವಟಿಕೆ ಮತ್ತು ಸರ್ಕಾರದ ನಿಯಮಗಳು ಗಾಳಿ ತೂರಿ ಇವರೇ ಖಾನಾಪುರ ಪಂಚಾಯಿತಿ ಹೈಕಮಾಂಡ್ ಇವರೇ ಇದ್ದಂತೆ ಕಾಣುತ್ತಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ತಾಲೂಕ ಪಂಚಾಯತಿ ಅಧಿಕಾರಿಗಳು ಕೂಡಲೇ ಪಿಡಿಒ, ಕಂಪ್ಯೂಟರ್ ಆಪರೇಟರ್ ಇಬ್ಬರನ್ನೂ ಕೂಡಲೇ ಹುದ್ದೆಯಿಂದ ಅಮಾನತು ಆದೇಶ ಹೊರಡಿಸಬೇಕು ಹಾಗೇ ಇವರ ಮೇಲೆ ಕಾನೂನು ಶಿಸ್ತು ಕ್ರಮ ಕೈಗೊಂಡು ಇವರಿಗೆ ತನಿಖೆಗೆ ಆದೇಶಿಸಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿ ತಮ್ಮ ಕುಟುಂಬಸ್ಥರಿಗೆ ಮನೆ ಹಾಕಿಕೊಂಡ ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವ ಸ್ಥಾನದಿಂದ ಅನರ್ಹರಗೊಳಿಸಿ. ಸರ್ಕಾರಕ್ಕೆ ನಷ್ಟವಾದ ಹಣ ಮರು ಪಾವತಿಸಿ ಕೊಳ್ಳಬೇಕು ತುರ್ತಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು ಒಂದು ವೇಳೆ ಇವರು ಮೇಲೆ ಕ್ರಮ ಕೈಗೊಳ್ಳದಿದ್ದರೆ ನಾವುಗಳು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮುಖಂಡ ರವೀಂದ್ರ ಪಾಟೀಲ್,ವಿಶ್ವನಾಥ್,ಬಾಬು ಕಟ್ಟಿಮನಿ, ಜಿಲ್ಲಾಧ್ಯಕ್ಷರಾದ ವಿರೂಪಣ್ಣ,ಕಾರ್ಯಾಧ್ಯಕ್ಷ ಸಿದ್ದು ಅರ್ಜುಣಗಿ,ಸೂರ್ಯಕಾಂತ ಕಟ್ಟಿಮನಿ,ವೆಂಕಟೇಶ್ ಯಲ್ಹೇರಿ,ಹೊನ್ನಪ್ಪ ದೇವರಳ್ಳಿ,ಬಂಗಾರೆಪ್ಪ ಚಕ್ಕಡಿ, ಸಾಬಣ್ಣ ಯಲ್ಹೇರಿ,ಮಾಳಪ್ಪ ವೂಂಟೂರ, ಮಲ್ಲಿಕಾರ್ಜುನ ನಾಯಕ್,ನಾಗು ರಂಗಯ್ಯನೋರ್,ಶ್ರೀನಿವಾಸ ಬರೆಗಾಲ್, ಮಲ್ಲಿಕಾರ್ಜುನ ವಡಿಗೇರಾ,ತಿಮ್ಮಣ್ಣ ಹಳಿಸಗರ, ಮಲ್ಲು ಗೌಡಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್