ಕಲಬುರಗಿ:ಒತ್ತಡದ ಬದುಕಿನಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತವೆ, ಯುವಕರಲ್ಲಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಏರುತ್ತಿದ್ದುˌ ಹೃದಯ ಸ್ತಂಭನದ ಸಂದರ್ಭದಲ್ಲಿ ಹೃದಯ ಮತ್ತು ಶ್ವಾಸಕೋಶ ಪ್ರಚೋದಕದ ಸಹಾಯದಿಂದ ಜೀವ ಉಳಿಸಬಹುದು ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಮೆಡಿಕಲ್ ನಿಕಾಯದ ಡೀನ್ ಡಾ.ಸಿದ್ದೇಶ ತಿಳಿಸಿದರು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಮೆಡಿಕಲ್ ನಕಾಯ ಏರ್ಪಡಿಸಿದ್ದ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ ಜಾಗ್ರತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಹೃದಯ ಸ್ತಂಭನದಿಂದಾಗಿ ಮೃತಪಟ್ಟ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ ನಮ್ಮಲ್ಲಿ ಸಿಪಿಆರ್ ಬಗ್ಗೆ ಮಾಹಿತಿ ಇದ್ದಲ್ಲಿ ನಾವು ಜೀವ ರಕ್ಷಕರಾಗಬಹುದು ಎಂದು ಸಿಪಿಆರ್ ದ ಮಹತ್ವ ಕುರಿತು ಹೇಳಿದ ಅವರು ಕೆಬಿಎನ್ ಮೆಡಿಕಲ್ ಕಾಲೇಜಿನ ಪ್ರಮಾಣೀಕೃತ ತರಬೇತುದಾರರು ಬೇರೆ ಕಾಲೇಜಿಗೆ ಹೋಗಿ ತರಬೇತಿ ನೀಡಲು ಸಿದ್ದರಿದ್ದಾರೆ ಎಂದರು.
ಕೆಬಿಎನ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಸಿದ್ದಲಿಂಗ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಳಿಸಿದ ಜ್ಞಾನದಿಂದ ಹೃದಯ ಸ್ತಂಭನದಿಂದ ಬಳಲುತ್ತಿರುವ ವ್ಯಕ್ತಿಯ ಜೀವ ಉಳಿಸಿ ಎಂದರು ಇಂದಿನ ದಿನಗಳಲ್ಲಿ ಯುವಕ, ಯುವತಿಯರು ರೋಗಿಯ ಸಹಾಯ ಮಾಡುವ ಬದಲು ರೀಲ್ಸ್ ಹಾಗೂ ವಿಡಿಯೋ ಮಾಡುವಲ್ಲಿ ನಿರತರಾಗಿದ್ದಾರೆ ಇದು ಸರಿಯಾದ ಬೆಳವಣಿಗೆಯಲ್ಲ ಎಂದ ಅವರು ಇಂತಹ ಒಳ್ಳೆಯ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಈ ಕಾರ್ಯಕ್ರಮಕ್ಕೆ ವಿಡಿಯೋ ನೀಡಿದಕ್ಕಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಮತ್ತು ವೈದ್ಯಕೀಯ ವಿಜ್ಞಾನದ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ ಜಾಗ್ರತಿ ಕುರಿತು ಮಾಹಿತಿಯನ್ನು ಒಳಗೊಂಡ ವಿಡಿಯೋ ಒಂದನ್ನು ಪ್ರದರ್ಶಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾದ ಅರವಳಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಜಿಬ್ರಾನ,ಶಿಶು ವೈದ್ಯ ವಿಭಾಗದ ಪ್ರೊಫೈಸ್ಸರ ಡಾ.ವಿನೋದ್,ಅರಿವಳಿಕೆ ವಿಭಾಗದ ಸಹ ಪ್ರಾಧ್ಯಾಪಕ ಡಾ.ಫುಕ್ರನ್, ಸಾಮಾನ್ಯ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮುಸ್ತಾಕ ಇವರು ವಿಭಿನ್ನ ಕಾರಣಗಳಿಂದ ವ್ಯಕ್ತಿಗಳಲ್ಲಿ ಹೃದಯ ಸ್ತಂಭನ ಕಾಣಿಸಿಕೊಂಡರೆ ಸಿಪಿಆರ್ ಸ್ಕಿಲ್ ಉಪಯೋಗಿಸಿ ಹೇಗೆ ಸ್ತಬ್ದ ರಕ್ತ ಪರಿಚಲನೆಯನ್ನು ಪುನರ್ ಆರಂಭಿಸಬಹುದು ಎಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು ಅಲ್ಲದೇ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆಯಿಸಿ ಅವರಿಂದ ಸಿಪಿಆರ್ ಮಾಡಲು ತರಬೇತಿ ನೀಡಿದ ನಂತರದಲ್ಲಿ ನಡೆದ ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಶನ್ ಮೊಹಮ್ಮದ್ ಖಾನ್ ಪ್ರಾರ್ಥಿಸಿದರು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಭಾರಿ ಮುಖಸ್ಥ ಡಾ.ಬಿಲಾಲ ವಂದಿಸಿದರೆ,ವಿದ್ಯಾರ್ಥಿನಿ ಡಾ.ಸಯ್ಯದಾ ಫಿರ್ದೋಸ ನುಶೀನ ನಿರೂಪಿಸಿದರು.
ಕೆಬಿಎನ್ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಡಾ.ಸಿದ್ದೇಶ್,ಐ ಕ್ಯೂ ಎ ಸಿ ನಿರ್ದೇಶಕ ಡಾ ಬಷೀರ,ಡಾ ಮುಜೀಬ್,ಡಾ. ಬದರಿನಾಥ,ಡಾ.ಸುನಿಲ್ ಮಾನೆ,ಡಾ.ಅಬ್ರಾರ ಮುಂತಾದವರು ಹಾಜರಿದ್ದರು.ಈ ಕಾರ್ಯಕ್ರಮದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ನೋಂದಣಿ ಮಾಡಿದ ಎಲ್ಲರಿಗೂ ಡಿಜಿಟಲ್ ಪ್ರಮಾಣಪತ್ರ ನೀಡಲಾಯಿತು.
ವರದಿ:ಅಪ್ಪಾರಾಯ ಬಡಿಗೇರ