ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗ್ರಾಮ ಸಭೆಗೆ ಇಲಾಖಾವಾರು ಅಧಿಕಾರಿಗಳು ಗೈರಾದರೆ,ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡುವ ಅಧಿಕಾರಿಗಳು ಯಾರು ಶಿವ?

ಕೊಟ್ಟೂರು:ಒಂದು ಗ್ರಾಮ ಸಭೆ ಎಂದರೆ ಅಲ್ಲಿನ ನಾಗರಿಕರ ಒಂದು ಸಭೆಯಾಗಿರುತ್ತದೆ ಈ ಸಭೆಯಲ್ಲಿ ಮುಂದಿನ ಯೋಜನೆಗಳನ್ನು, ಅನುದಾನವನ್ನು ಚರ್ಚೆಯ ಮಾಡುವ ಮೂಲಕ ಮುಂಜೂರು ಮಾಡಲಾಗುತ್ತದೆ ಈ ಸಭೆಗೆ ಸಂಬಂಧಪಟ್ಟ ಇಲಾಖೆವಾರು ಅಧಿಕಾರಿಗಳು ಹಾಜರಾಗಿರಬೇಕು ಆ ಇಲಾಖೆಗೆ ಸಂಬಂಧಪಟ್ಟ ಸಾರ್ವಜನಿಕರ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡಬೇಕು ಒಂದು ವೇಳೆ ಇಲಾಖಾವರು ಅಧಿಕಾರಿಗಳು ಈ ಸಭೆಗೆ ಗೈರಾದರೆ,ಅಲ್ಲಿನ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುವ ಅಧಿಕಾರಿಗಳು ಯಾರು?

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮ ಪಂಚಾಯತಿಯಲ್ಲಿ 5/12/2023 ರಂದು ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ‌ಸಭೆಯ ಅಧ್ಯಕ್ಷತೆ ಮತ್ತು ನೋಡಲ್ ಅಧಿಕಾರಿಯನ್ನಾಗಿ ಹೊಳಲಮ್ಮ ಹನುಮಂತಪ್ಪ ನವರು ವಹಿಸಿದ್ದರು ಆದರೆ ಈ ಗ್ರಾಮ ಸಭೆಗೆ ಇಲಖಾವಾರು ಅಧಿಕಾರಿಗಳು ಸಭೆಗೆ ಹಾಜರಾಗದೆ ನೋಟಿಸ್ ನೀಡಿದ ಎಲ್ಲಾ ಅಧಿಕಾರಿಗಳು ಗೈರು ಆಗಿರುವುದರಿಂದ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರ ಪತಿಯಾದ,ವಿ ಬಸವರಾಜ , ಗ್ರಾ.ಪ.ಸದಸ್ಯರಾದ ಎನ್ ವಿರುಪಾಕ್ಷ
ಟಿ ಪ್ರಕಾಶ ಮತ್ತು ತಾಲೂಕು ಡಿಎಸ್ಎಸ್ ಸಂಘಟನಾ ಸಂಚಾಲಕರಾದ ಹೆಚ್ ಮಾರೇಶ ರವರು ಪ್ರತಿ ಗ್ರಾಮ ಸಭೆಗೆ ಸಂಪೂರ್ಣ ಅಧಿಕಾರಿಗಳು ಹಾಜುರಾಗದೆ ಪ್ರತಿಸಲವೂ ಏನೇನೋ ಕಾರಣಗಳನ್ನು ಹೇಳಿ ಗ್ರಾಮ ಸಭೆಯನ್ನು ನಡೆಸುತ್ತೀರಿ,ಆದರೆ ಒಂದು ಬಾರಿಯೂ ಇಲಾಖಾವಾರು ಎಲ್ಲಾ ಅಧಿಕಾರಿಗಳು ಉಪಸ್ಥಿತರಿರದೆ ಗೈರಾಗುತ್ತಾರೆ ಅವರ ಮೇಲೆ ಏನು ಕ್ರಮವನ್ನು ಜರುಗಿಸಿದ್ದೀರಿ?ಅವರಿಗೆ ನೋಟಿಸ್ ನೀಡಿರುವಿರಾ?ಅಥವಾ ಇಲ್ಲವೋ?ಪ್ರತಿಸಲ ಹೀಗೆ ಆದರೆ ಇದಕ್ಕೆ ಗ್ರಾಮಸಭೆ ಎನ್ನುತ್ತಾರಾ? ಈ ಬಾರಿ ಇಲಾಖಾವಾರು ಯಾವ ಅಧಿಕಾರಿಯು ಬಂದಿರುವುದಿಲ್ಲ,ಇದಕ್ಕೆ ಕಾರಣ ಏನು? ಇಲಾಖಾವಾರು ಅಧಿಕಾರಿಗಳು ಇಲ್ಲದಿದ್ದರೆ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡುವವರು ಯಾರು? ಎಂದು ಪ್ರಶ್ನೆಗಳ ಸುರಿ ಮಳೆಯನ್ನು ಸುರಿಸಿದ್ದಾಗ,ಅನೇಕ ನೋವು ಉಂಡ
ಪಿ ಡಿ ಓ ದೆವೇಶ ರವರು ಗ್ರಾಮ ಸಭೆಯನ್ನು ಅಧ್ಯಕ್ಷರ ಒಪ್ಪಿಗೆಯ ಮೇರೆಗೆ ಮುಂದೂಡಲಾಯಿತು ಆದರೂ ಪಟ್ಟು ಬಿಡದೆ ಗೈರಾದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯ ಮಾಡಿದರು.
ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ ಅಧಿನಿಯಮ 1993ರ 48 (4)ರ ಪ್ರಕಾರ ಗೈರಾಗುವ ಸದಸ್ಯರನ್ನು ಅಮಾನತ್ತುಗೊಳಿಸಲು ಸರಕಾರ ಆದೇಶ ಹೊರಡಿಸಿದೆ ಆದರೆ ಗೈರಾಗುವ ಅಧಿಕಾರಿಗಳನ್ನು ಕಾನೂನು ಪ್ರಕಾರ ಯಾವ ಶಿಕ್ಷೆ ಕೊಡುವದೆಂದು ಕಾದುನೋಡೋಣ!

ಆಗ ಪಿಡಿಓ ರವರು ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ವಿಚಾರಿಸಿ,ಅವರ ಗಮನಕ್ಕೆ ತರುತ್ತೇನೆ ಎಂದರು ಇದಕ್ಕೆ ಪ್ರತಿಯಾಗಿ ನೋಡಲ್ ಅಧಿಕಾರಿಯಿಲ್ಲದೆ ಗ್ರಾಮ ಸಭೆ ನಡೆಸುವುದು ಎಷ್ಟು ಸರಿ ಎಂದು ಮತ್ತೆ ಪ್ರಶ್ನಿಸಿದರು ಒಟ್ಟಿನಲ್ಲಿ ಎಲ್ಲಾ ಸಮಸ್ಯೆಗಳಿಂದ ಗ್ರಾಮ ಸಭೆಯನ್ನು ಮುಂದೂಡಲಾಯಿತು ಮುಂದಿನ ಗ್ರಾಮ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದು, ಸಭೆಯನ್ನು ಯಶಸ್ವಿಗೊಳಿಸಬೇಕು ಎಂಬುವುದೇ ನಮ್ಮ “ಕರುನಾಡ ಕಂದ ಪತ್ರಿಕೆ”ಆಶಯ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಕೆಲವು ಸದಸ್ಯರು,ಊರಿನ ಮುಖಂಡರು,ಗ್ರಾಮ ಸಭೆಗೆ ಆಗಮಿಸಿದ ನಾಯಕರು,ಪಿಡಿಓ ಮತ್ತು ಸಿಬ್ಬಂದಿಗಳು,ಶಾಲಾ ಶಿಕ್ಷಕರು,ನಸ್೯ಗಳು, ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ