ಬಳ್ಳಾರಿ/ಸಿರುಗುಪ್ಪ:ತುಂಗಾಭದ್ರ ನದಿಪಾತ್ರದ ತಾಲೂಕಿನ ರುದ್ರಪಾದ,ಗ್ರಾಮಗದಲ್ಲಿ ಹಾಡಹಗಲೇ ಕಬ್ಬಿಣದ ತೆಪ್ಪಗಳ ಮೂಲಕ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದ್ದರೂ ಸಂಬoದಿಸಿದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಕಂಡಬಂದಿತು.ಮರಳು ದಂಧೆಯನ್ನೇ ಕಾರ್ಯವನ್ನಾಗಿಸಿಕೊಂಡಿರುವ ಕೆಲವು ದಂಧೆಕೋರರು ಕಾರ್ಮಿಕರನ್ನು ಬಳಸಿಕೊಂಡು ನದಿಯಲ್ಲಿ ಮುಳುಗಿ ಕಬ್ಬಿಣದ ತೆಪ್ಪದ ಮೂಲಕ ಮರಳು ತಂದು ಒಂದೆಡೆ ಸಂಗ್ರಹಿಸಿಕೊoಡು ರಾತ್ರಿವೇಳೆ ಸಾಗಾಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು.
ಈ ಬಗ್ಗೆ ವರದಿಗಾರರು ಅಧಿಕಾರಿಗಳ ಗಮನಕ್ಕೆ ತಂದಾಗ ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಪೋಲೀಸ್ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಮರಳಿಗೆ ಬಳಸುತ್ತಿರುವ ಒಂದು ತೆಪ್ಪವನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.