ಕೊಟ್ಟೂರು:2023-24 ನೇ ಸಾಲಿನಲ್ಲಿ ಕೊಟ್ಟೂರು ಬರಪೀಡಿತ ತಾಲೂಕು ಎಂದು ಘೋಷಣೆಯಾಗಿರುತ್ತದೆ.
ಸರ್ಕಾರದಿಂದ ಮುಂದಿನ ದಿನಗಳಲ್ಲಿ ಜಾನುವಾರಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಲು
ಸೂಚಿಸಿರುವುದರಿಂದ ಕೊಟ್ಟೂರು ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಪೂರ್ವ ಸಿಧ್ದತೆಯನ್ನು ಮಾಡಿಕೊಳ್ಳಬೇಕಾಗಿರುವದರಿಂದ ಕೊಟ್ಟೂರು ತಾಲೂಕಿನ ರೈತರು ತಮ್ಮ ಬಳಿ ಇರುವ ಹೆಚ್ಚುವರಿ ಮೇವನ್ನು ಸರ್ಕಾರಕ್ಕೆ ಮಾರಾಟ ಮಾಡಲು ಬಯಸಿದ್ದಲ್ಲಿ ಮಾರಾಟ ಮಾಡಬಹುದಾದ ಮೇವಿನ ಲಭ್ಯತೆ ಧರಪಟ್ಟಿ ಹಾಗೂ ವಿಧಧ ವಿವರಗಳನ್ನು ಪಶುಸಂಗೋಪನಾ ಇಲಾಖೆ ಪಶು ಅಸ್ಪತ್ರೆ ಕೊಟ್ಟೂರು ಇಲ್ಲಿಗೆ ರೈತರು 15 ದಿನಗಳೊಳಗೆ ತಮ್ಮ ಹೆಸರನ್ನು ನೋಂದಾಯಿಸಲು ಪಶು ಅಸ್ಪತ್ರೆ ಸಹಾಯಕ ನಿರ್ದೇಶಕರು ಕೊಟ್ಟೂರು ಹಾಗೂ ಸದಸ್ಯರು ಕೊಟ್ಟೂರು ತಾಲೂಕು ಬರಗಾಲ ಟಾಸ್ಕ್ ಪೋರ್ಸ್ ಸಮಿತಿ ಕೊಟ್ಟೂರು ರವರು ತಾಲೂಕಿನ ರೈತರಿಗೆ ಮನವಿ ಮಾಡಿರುತ್ತಾರೆ.
