ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹುಂಡಿ ಎಣಿಕೆ ಕಾರ್ಯ ಮುಜರಾಯಿ ಇಲಾಖೆ ಅಧಿಕಾರಿಗಳು,ತಾಲೂಕು ದಂಡಾಧಿಕಾರಿ ಪುಟ್ಟ ರಾಜ ಗೌಡ,ರಾಜಸ್ವ ನಿರೀಕ್ಷಕ ರಮೇಶ್,ಗ್ರಾಮ ಅಡಳಿತ ಅಧಿಕಾರಿ ದೊಡ್ಡೇಶ ಇವರ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಶ್ರೀ ಕ್ಷೇತ್ರದಲ್ಲಿ ಪ್ರತಿ ಅಮಾವಾಸ್ಯೆ ದಿನ ನೂರಾರು ಭಕ್ತಾದಿಗಳು ಬರುತ್ತಾರೆ ಪ್ರತಿ ಅಮಾವಾಸ್ಯೆಗೆ ಪ್ರಸಾದ ವಿನಿಯೋಗ ನಡೆಯುತ್ತದೆ ಪ್ರಸಾದವನ್ನು ತಯಾರಿಸಲು ಅಡುಗೆಮನೆ ಇಲ್ಲದೆ ಇರುವುದರಿಂದ ದೇವಸ್ಥಾನ ಹೊರವಲಯದಲ್ಲಿ ಮಾಡುವುದರಿಂದ ಮಳೆಗಾಲದ ಸಮಯದಲ್ಲಿ ತುಂಬಾ ತೊಂದರೆಯಾಗುತ್ತಿದೆ ಅದರಿಂದ ಪ್ರಸಾದ ನಿಲಯವನ್ನು ಕಟ್ಟಿಸಿ ಕೊಡುವಂತೆ ಮಾನ್ಯ ತಾಲೂಕು ದಂಡಾಧಿಕಾರಿ ಪುಟ್ಟ ರಾಜ ಗೌಡ ಹತ್ತಿರ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹುಂಡಿ ಹಣ 7,40275, ಸಂಗ್ರಹವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮಸ್ಥರು
ಹನುಮಂತಪ್ಪ,ಸಿದ್ದೇಶ್,ಅಣ್ಣಪ್ಪ ಸ್ವಾಮಿ, ಸೋಮಶೇಖರ್ ಉಪಸ್ಥಿತರಿದ್ದರು.
ವರದಿ-ಪ್ರಭಾಕರ ಡಿ.ಎಮ್
