ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿ.ಇ.ಓ.)ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಕ.ರ.ವೇ ಆಗ್ರಹ

ದಾವಣಗೆರೆ/ಹೊನ್ನಾಳಿ:ಶ್ರೀ ಕೆ.ಆರ್.ಗೋಣಪ್ಪ ಎಂಬುವರು ಸ.ಹಿ.ಪ್ರಾಶಾಲೆ ಗೊಲ್ಲರಹಳ್ಳಿಯಲ್ಲಿ ಶಿಕ್ಷಕರಾಗಿ ತೃಪ್ತಿಕರವಾಗಿ ಕರ್ತವ್ಯ ನಿರ್ವಹಿಸಿ,ಸದರಿ ಗ್ರಾಮದಲ್ಲಿ ಮತ್ತು ತಮ್ಮ ಇಲಾಖೆಯಲ್ಲಿಯೂ ಉತ್ತಮ ಹೆಸರು ಪಡೆದಿರುತ್ತಾರೆ ಇವರು ದಿನಾಂಕ 30-06-2023ರಂದು ವಯೋನಿವೃತ್ತಿ ಹೊಂದಿರುತ್ತಾರೆ ಇಂತಹ ಶಿಕ್ಷಕರಿಗೆ ಗೌರವಯುತವಾಗಿ ನಡೆಸಿಕೊಳ್ಳುವುದು ಮತ್ತು ನಿವೃತ್ತಿಯ ನಂತರ ಸರಕಾರ/ಇಲಾಖೆಯಿಂದ ಅವರಿಗೆ ದೊರೆಯುವ ಎಲ್ಲಾ ನಿವೃತ್ತಿ ವೇತನ ಮತ್ತು ಉಪದಾನಗಳು ಸೇರಿದಂತೆ ಇತರ ಎಲ್ಲಾ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಹಾಗೂ ನಿಗದಿತ ಅವಧಿಯಲ್ಲಿ ದೊರಕಿಸಿಕೊಡುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿ.ಇ.ಓ.) ಆದ್ಯ ಕರ್ತವ್ಯವಾಗಿರುತ್ತದೆ.
ಆದರೆ ಸದರಿ ಶಿಕ್ಷಕರ ನಿವೃತ್ತಿ ವೇತನ ಮತ್ತು ಉಪದಾನಗಳಿಗೆ ಸಂಬಂಧಿಸಿದ ಕಡತಗಳನ್ನು ಸಂಬಂಧಪಟ್ಟ ಪ್ರಾಧಿಕಾರ/ಕಛೇರಿಗೆ ಕಳುಹಿಸಿಕೊಡುವಲ್ಲಿ ಸದರಿ ಬಿ.ಇ.ಓ. ಹಾಗೂ ಅವರ ಕಛೇರಿ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯ, ಅನಗತ್ಯ ವಿಳಂಬ ಹಾಗೂ ಕರ್ತವ್ಯಲೋಪದಿಂದ ಸದರಿ ಶಿಕ್ಷಕರಿಗೆ ಸುಮಾರು 6 ತಿಂಗಳು ಕಳೆದರೂ ಯಾವುದೇ ನಿವೃತ್ತಿ ವೇತನ,ಉಪದಾನ ಮತ್ತು ಇತರೆ ಯಾವುದೇ ಸೌಲಭ್ಯಗಳು ದೊರೆತಿರುವುದಿಲ್ಲ. ಸರಕಾರಿ ವೇತನವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಇವರು ತುಂಬಾ ಕಷ್ಟಕ್ಕೊಳಗಾಗಿದ್ದಾರೆ ನಿವೃತ್ತಿಯ ನಂತರ ಬರುವ ಹಣವನ್ನು ನಂಬಿಕೊಂಡು ಬಡ್ಡಿಯಂತೆ ಕೈಸಾಲ ಪಡೆದು ತಮ್ಮ ಮಕ್ಕಳ ಮದುವೆ ಮಾಡಿದ್ದಾರೆ. ಪ್ರತೀ ತಿಂಗಳು ಸುಮಾರು 25 ಸಾವಿರ ರೂ. ಬಡ್ಡಿಯನ್ನುಕಟ್ಟುತ್ತಿದ್ದಾರೆ ಒಂದು ಹೊತ್ತಿನ ಊಟಕ್ಕೂ ತೊಂದರೆಯುಂಟಾಗಿ ಸಂಸಾರ ನಡೆಸುವುದೇ ಕಷ್ಟಕರವಾಗಿದೆ ನಿವೃತ್ತಿ ವೇತನವಿಲ್ಲದೇ 6 ತಿಂಗಳುಗಳ ಕಾಲ ಮನೆಬಾಡಿಗೆ ಕಟ್ಟದೇ ಇದ್ದುದರಿಂದ ಮನೆ ಮಾಲಿಕರು ಸದರಿ ಶಿಕ್ಷಕ ಕುಟುಂಬವನ್ನು ಹೊರಹಾಕಿ ಗಲಾಟೆ ಮಾಡಿದ್ದರಿಂದ ಅವಮಾನಿತಾರಾದ ಸದರಿ ಶಿಕ್ಷಕ ಕುಟುಂಬ ತಮ್ಮ ಸ್ವಂತ ಊರು ಜಗಳೂರಿಗೆ ಮನೆ ಖಾಲಿಮಾಡಿಕೊಂಡು ಕಣ್ಣೀರು ಹಾಕುತ್ತಾ ಹೋಗಿದ್ದಾರೆ ಇದೆಲ್ಲವನ್ನೂ ನಾವು ಕಣ್ಣಾರೆ ಕಂಡಿರುವೆವು ಇವರ ಈ ಎಲ್ಲಾ ಕಷ್ಟ-ನೋವುಗಳಿಗೆ ಸದರಿ ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ನೇರ ಹೊಣೆಗಾರರಾಗಿದ್ದಾರೆ ಇವರು ಮಾಡಿರುವ ತಪ್ಪು ಮತ್ತು ಕರ್ತವ್ಯಲೋಪದಿಂದ ಅಮಾಯಕ ಮುಗ್ಧ ಶಿಕ್ಷಕ ಸಾಲದ ಸುಳಿಯಲ್ಲಿ ಸಿಲುಕಿ ಬಡ್ಡಿಯನ್ನು ಕಟ್ಟುವಂತಾಗಿ,ಊರನ್ನೇ ಬಿಟ್ಟುಹೋಗುವ ಸಂದರ್ಭ ಮತ್ತು ತುಂಬಾ ಕಷ್ಟವನ್ನು ಅನುಭವಿಸಬೇಕಾಗಿದೆ.
ಆದ್ದರಿಂದ ತಾವುಗಳು,ಅನಗತ್ಯ ವಿಳಂಬ,ಕರ್ತವ್ಯ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪವೆಸಗಿರುವ ಸದರಿ ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿ.ಇ.ಓ.) ವಿರುದ್ಧ ಸೂಕ್ತ ಕಾನೂನು/ಇಲಾಖಾ ಕ್ರಮ ಕೈಗೊಂಡು,ಸದರಿ ಶಿಕ್ಷಕರಿಗೆ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸಿಕೊಡಬೇಕು ಹಾಗೂ ಮುಂದೆ ನಿವೃತ್ತಿಯಾಗುವ ಶಿಕ್ಷಕರಿಗೆ ಈ ರೀತಿ ಅನ್ಯಾಯವಾಗದ ರೀತಿಯಲ್ಲಿ ಕ್ರಮ ವಹಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮುಷ್ಕರ ಮಾಡಲಾಯಿತು.ಈ ಸಂದರ್ಭದಲ್ಲಿ ಭ್ರಷ್ಟಾಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಗುರುಪಾದಯ್ಯ ಮಠದ ರಾಜು ಕಡಗಣ್ಣನವರ್ ಹನುಮಂತಪ್ಪ ಸೊರಟೂರ್ ವಿನಯ್ ವಗ್ಗರ್ ತಾಲೂಕು ರಕ್ಷಣಾ ವೇದಿಕೆ ಅಧ್ಯಕ್ಷರು ಇನ್ನು ಅನೇಕ ಮುಖಂಡರು ಭಾಗಿಯಾಗಿದ್ದರು.

ವರದಿ-ಪ್ರಭಾಕರ ಡಿ ಎಂ,ಹೊನ್ನಾಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ