ಯಾದಗಿರಿ:ಮಗುವಿನ ಸರ್ವಾಂಗೀಣ ವ್ಯಕ್ತಿತ್ವ ವಿಕಾಸನಕ್ಕೆ ಶಿಕ್ಷಣ ಪೂರಕವಾಗಿದೆ,ಅಲ್ಲದೆ
ಬೋಧನೆಯಲ್ಲಿ ಸಿಗುವ ಸಂತೋಷ,ಖುಷಿ, ನೆಮ್ಮದಿ,ಬೇರೆಲ್ಲೂ ಇಲ್ಲ ಆದ್ದರಿಂದ ಶಿಕ್ಷಕ ವೃತ್ತಿ ನನಗೆ ಸಂಪೂರ್ಣವಾಗಿ ತೃಪ್ತಿ ತಂದಿದೆ ಎಂದು ನಿವೃತ್ತ ಶಿಕ್ಷಕಿ ಅನಿತಾ ಢಗೆ ಹೇಳಿದರು.
ಶಹಾಪುರ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಶಿಕ್ಷಕಿಯಾದ ಅನಿತಾ ಢಗೆ ಅವರ ವಯೋನಿವೃತ್ತಿ ಆಯೋಜಿಸಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಈ ಗ್ರಾಮದಲ್ಲಿ ಸುಮಾರು 25 ವರ್ಷಗಳಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದೇನೆ ಇಲ್ಲಿಯ ಜನರ ಪ್ರೀತಿ-ವಿಶ್ವಾಸಕ್ಕೆ ನಾನೆಂದು ಚಿರಋಣಿಯಾಗಿರುತ್ತೇನೆ ಎಂದು ನುಡಿದರು.
ಒಬ್ಬ ಸಾಮಾನ್ಯ ವ್ಯಕ್ತಿಯನ್ನು ದೇಶದ ಸತ್ಪ್ರಜೆಯನ್ನಾಗಿ ಮಾಡುವ ಶಕ್ತಿ ಕೇವಲ ಗುರುವಿನಲ್ಲಿದೆ,ಕಲಿಸಿದ ಗುರುಗಳಿಗೆ ಗೌರವ ಸಮರ್ಪಿಸುವುದರಿಂದ ಧನ್ಯತಾಭಾವ ಪ್ರಾಪ್ತಿ ಯಾಗುವುದೆಂದರು,ಇಂಥ ಖುಷಿಗೆ ಮತ್ತೇನು ಬೇಕಿಲ್ಲ ಎಂದು ಭಾವುಕತೆಗೆ ಒಳಗಾದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂತೋಷ ಗೌಡ ಸುಬೇದಾರ,ಚೆನ್ನಪ್ಪ ಜಾಯಿ,ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶಂಕರ ಪಡಶೆಟ್ಟಿ,ದತ್ತು ಕೈನೂರ,ಗುರು ಪತ್ತಾರ್,ಆನಂದ್ ಗೊರವಾಯಿ ಹಾಗೂ ಇನ್ನಿತರ ಶಿಕ್ಷಕರ ಬಳಗವದವರು ಉಪಸ್ಥಿತರಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ್