ಕೊಟ್ಟೂರು:ಪಟ್ಟಣದ ತುಂಗಭದ್ರಾ ಬಿ ಎಡ್ ಕಾಲೇಜು ಆವರಣದಲ್ಲಿ ಶ್ರೀ ದುರ್ಗಾ ಹಾಸ್ಪಿಟಲ್ ದಾವಣಗೆರೆ ಇವರ ವತಿಯಿಂದ ಕೊಟ್ಟೂರು ಹಾಗೂ ಸುತ್ತಮುತ್ತಲಿನ ನಾಗರೀಕರಿಗೆ ಉತ್ತಮ ಉಚಿತ ಚಿಕಿತ್ಸೆ ಕಾರ್ಯಕ್ರಮ ನಡೆಯಿತು.
ಕೂಲಿ ಕಾರ್ಮಿಕರಿಗೆ ಸಾಮಾನ್ಯ ಜನರಿಗೆ ಉಚಿತ ಆರೋಗ್ಯ ಶಿಬಿರ ಮಾಡಬೇಕೆಂಬ ಕಳಕಳಿಯಿಂದ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದರು.
ಆ ಕಾರಣ ನಮ್ಮ ಸಂಸ್ಥೆಯ ವಿವಿಧ ಆರೋಗ್ಯ ವಿಷಯದಲ್ಲಿ ಪರಿಣಿತಿ ಹೊಂದಿರುವ ಡಾ|| ರಮೇಶ್ ಪೂಜಾರ್ ಎಂ.ಬಿ.ಬಿ.ಎಸ್ ಎಂ.ಎಸ್.(ಅರ್ಥೋ) ಕ್ಲಿನಿಕಲ್ ಫೆಲೋಶಿಪ್ (ಮುಂಬಯಿ), ಹಾಗೂ ಅವರ ಸಹಪಾಠಿಗಳಾದ ಡಾ||ಯಲ್ಲಪ್ಪ ರಡ್ಡಿ ಹೆಚ್.ಎಂ.ಎಂಬಿಬಿಎಸ್ ಎಂ.ಡಿ ಜನರಲ್ ಮೆಡಿಸನ್,ಡಾ|| ವರ್ಷಾ.ಎಸ್.ಎಂ.ಬಿ.ಬಿ.ಎಸ್. ಎಂ.ಎಸ್.ಜನರಲ್ ಸರ್ಜರಿ ಲ್ಯಾಪರಸ್ಕೋಪಿಕ್ ಸರ್ಜನ್,ಡಾ||ಬಸವರಾಜ್ ಶಿವಪೂಜಿ ಎಂ.ಪಿ.ಟಿ.ಸಿ.ಎಂ.ಟಿ ಫಿಜಿಯೋಥೆರಪಿಸ್ಟ್ ಇವರಿಂದ 300ಕ್ಕೂ ಹೆಚ್ಚಿನ ಜನರಿಗೆ ವಿವಿಧ ಕಾಯಿಲೆಗಳಿಗೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಯಿತು ಎಂದರು.
ಕರ್ನಾಟಕ ಸರ್ಕಾರದ ಅತ್ಯುತ್ತಮ ಆರೋಗ್ಯ ಯೋಜನೆಯಾದ ಯಶಸ್ವಿನಿ ಕಾರ್ಡ್ ಇದ್ದವರಿಗೆ ಮಂಡಿಚಿಪ್ಪು ಮರುಜೋಡಣೆ ಮಾಡಲಾಗುವುದು ಎಂದು ತಿಳಿಸಿದರು.
ಹೀಗೆ ಮುಂದಿನ ದಿನಗಳಲ್ಲಿ ಜನರು ಸ್ಪಂದಿಸಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ಕೊಟ್ಟೂರು ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಜೊತೆ ಸೇರಿ ಉಚಿತ ಆರೋಗ್ಯ ಚಿಕಿತ್ಸೆ ಶಿಬಿರ ನಡೆಸಲಾಗುವುದು ಎಂದು ಶ್ರೀ ದುರ್ಗಾ ಹಾಸ್ಪಿಟಲ್ ದಾವಣಗೆರೆ ಇದರ ಮುಖ್ಯಸ್ಥರಾದ ಡಾ||ರಮೇಶ್ ಪೂಜಾರ್ ಹಾಗೂ ಸಂಸ್ಥೆಯ ಮಾರ್ಕೆಟಿಂಗ್ ಅಧಿಕಾರಿ ಸತೀಶ್ ಅವರು ಮಾತನಾಡಿ ಈ ಭಾಗದಿಂದ ಯಾವುದೇ ರೋಗಿ ಬಂದರು ಅಂಥವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ