ಯಾದಗಿರಿ:ವಡಗೇರಾ ತಾಲೂಕಿನ ಕೊಂಕಲ್ ಚನ್ನೂರ್ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರುಳುಗಾರಿಕೆಯನ್ನು ತಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ನೇತೃತ್ವದಲ್ಲಿ ಇಂದು ವಡಗೇರಾ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಮಲ್ಲಣ್ಣಗೌಡ ಹಗರಟಗಿ ಮಾತನಾಡುತ್ತಾ ಪರವಾನಿಗೆ ಇಲ್ಲದೆ ವಡಗೇರಾ ತಹಸಿಲ್ದಾರ್ ಹಾಗೂ ಪೊಲೀಸ್ ಠಾಣೆ ಕಚೇರಿಗಳ ಮುಂದೆ ದಿನನಿತ್ಯ ನೂರಾರು ಲಾರಿಗಳು ಅಕ್ರಮ ಮರಳು ಸರಬರಾಜು ನಡೆಯುತ್ತಿದ್ದರೂ ಆದರೆ ಅಧಿಕಾರಿಗಳು ನಮಗೂ ಇದ್ದಕ್ಕೂ ಸಂಬಂಧವಿಲ್ಲದಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತಿರುವಂತೆ ಕಾಣುತ್ತದೆ.
ಹಾಗೂ ಅಕ್ರಮ ಮರಳು ದಂಧೆ ಕೋರರು ಯಾವುದೇ ರೀತಿ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಈಗಾಗಲೇ ರೈತರು ಬರಗಾಲದಲ್ಲಿ ತತ್ತರಿಸಿ ಹೋಗಿದ್ದಾರೆ ನದಿಯಲ್ಲಿ ಮರಳು ಹಗೆಯುವುದರಿಂದ ಜಲ ಮಟ್ಟ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು.
ಅಕ್ರಮ ಮರುಳುಗಾರಿಕೆಯಿಂದ ಸರ್ಕಾರಕ್ಕೆ ಬೊಕ್ಕಸಕ್ಕೆ ತುಂಬಾ ನಷ್ಟವಾಗುತ್ತಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಮರಳು ದಂಧೆಯನ್ನು ತಡೆ ಹಿಡಿಯಬೇಕು ಒಂದು ವೇಳೆ ನಿರ್ಲಕ್ಷ್ಯ ತೋರಿದ್ದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಗುರುನಾಥ ರೆಡ್ಡಿ ಗೌಡ ಹದನೂರ,ವಡಗೇರಾ ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕ,ಗೌರವ ಅಧ್ಯಕ್ಷ ಶರಣು ಜಡಿ,ಸತೀಶ್ ಪೂಜಾರಿ,ಮಲ್ಲು ನಾಟೇಕಾರ, ಕೃಷ್ಣ ಟೇಲರ್,ತಿರುಮಲೇಶ್ ಗುತ್ತೆದಾರ ಹಾಗೂ ಇನ್ನಿತರರು ಎಚ್ಚರಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್