ಭದ್ರಾವತಿ:ದ್ವಿಚಕ್ರ ವಾಹನ ಕಳುವಾದ ಬೆನ್ನಲ್ಲೇ ಭದ್ರಾವತಿ ಉಪವಿಭಾಗದ ಎರಡು ಠಾಣೆಯಲ್ಲಿ ದಾಖಲಾದ ದೂರಿನ ಹಿನ್ನಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ,5,20,000 ರೂ. ಅಂದಾಜು ಮೌಲ್ಯದ 14 ಬೈಕ್ ಗಳನ್ನು ಪತ್ತೆ ಮಾಡಲಾಗಿದೆ.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ವತ್ತು ಕಳುವು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡು ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು.ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತಿಘಟ್ಟದಲ್ಲಿ ತೋಟಕ್ಕೆ ತೆರಳಿ ವಾಪಾಸ್ ಬರುವುದರೊಳಗೆ ನಂದೀಶ್ ಎಂಬುವವರ ಬೈಕ್ ಕಳವಾಗಿತ್ತು ಅದರಂತೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಹಮ್ನದ್ ಸೊಹೇಬ್ ಎಂಬುವರ ಬೈಕ್ ಕಳುವಾಗಿತ್ತು.
ಆರೋಪಿಗಳು ಮತ್ತು ಕಳುವಾದ ಬೈಕ್ ಗಳ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ.ಮಾರ್ಗದರ್ಶನದಲ್ಲಿ,ಡಿವೈಎಸ್ಪಿ ನಾಗರಾಜ್ ಕೆ ಆರ್ ರವರ ಮೇಲ್ವಿಚಾರಣೆಯಲ್ಲಿ ನಗರ ಸಿಪಿಐ ಶ್ರೀಶೈಲಕುಮಾರ್,ಗ್ರಾಮಾಂತರ ಪಿಐ ಜಗದೀಶ ಹಂಚಿನಾಳ್,ಪೇಪರ್ ಟೌನ್ ನ ಶ್ರೀಮತಿ ನಾಗಮ್ಮ, ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಲಕ್ಷ್ಮಿಪತಿ ರವರುಗಳ ನೇತೃತ್ವದಲ್ಲಿ ಹೊಳೆಹೊನ್ನೂರು ಠಾಣೆಯ ಪಿಎಸ್ಐ ಸುರೇಶ್, ನ್ಯೂಟೌನ್ ಪೋಲಿಸ್ ಠಾಣೆಯ ಪಿಎಸ್ಐ ರಮೇಶ್,ಗ್ರಾಮಾಂತರ ಠಾಣೆಯ ಎ ಎಸ್ ಐ ಚಂದ್ರಶೇಖರ್ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ.ನವೀನ್,ಚನ್ನಕೇಶವ,ನಾಗರಾಜ್,ಆದರ್ಶ ರವರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.ಇದರಂತೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ತಂಡ ರಚಿಸಲಾಗಿತ್ತು ನಂದೀಶ್ ರವರ ಬೈಕ್ ಪತ್ತೆಗೆ ಹೊರಟ ಪೊಲೀಸರಿಗೆ ಎರಡು ಬೈಕ್ ಪತ್ತೆಯಾಗಿದೆ. ಶಿವಮೊಗ್ಗ ರಾಗಿಗುಡ್ಡದ ಪ್ರಭು ಯಾನೆ ಕೋಳಿ ಯನ್ನ ಬಂಧಿಸಲಾಗಿದೆ.
ಸೋಹೇಬ್ ಅವರ ಬೈಕ್ ಪತ್ತೆಗೆ ಹೊರಟ ಪೊಲೀಸರ ತಂಡಕ್ಕೆ,ಭರ್ಜರಿಯ ಭೇಟೆಯೇ ದೊರಕಿದೆ.
ಆರೋಪಿಗಳಾದ
1) ಅಬ್ದುಲ್ ಕರೀಂ @ ಕರೀಂ @ ಮನ್ನಾ,27 ವರ್ಷ,ಸಿದ್ದಾಫುರ ಹೊಸೂರುಭಧ್ರಾವತಿ
2) ಅರ್ಷೀಲ್ ಪಾಷಾ @ ಹರ್ಷೀಲ್,34 ವರ್ಷ, ಸಿದ್ದಾಫುರ ಹೊಸೂರು ಭದ್ರಾವತಿ ರವರನ್ನು ದಸ್ತಗಿರಿ ಮಾಡಲಾಗಿದೆ.
ಆರೋಪಿತರಿಂದ ನ್ಯೂಟೌನ್ ಪೊಲೀಸ್ ಠಾಣೆಯ 7,ಹೊಸಮನೆ ಪೊಲೀಸ್ ಠಾಣೆಯ 2,ಪೇಪರ್ ಟೌನ್ ಪೊಲೀಸ್ ಠಾಣೆಯ 1,ದೊಡ್ಡಪೇಟೆ ಪೊಲೀಸ್ ಠಾಣೆಯ 1,ತರೀಕೆರೆ ಪೊಲೀಸ್ ಠಾಣೆಗೆ ಸೇರಿದ 1 ಪ್ರಕರಣ ಸೇರಿ ಒಟ್ಟು 12 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 12 ಬೈಕ್ ಗಳು ಹಾಗೂ ಕೃತ್ಯಕ್ಕೆ ಬಳಸಲಾದ 2 ಬೈಕ್ ಗಳು ಸೇರಿ ಅಂದಾಜು-5 20.000 ರೂಗಳ,14 ಬೈಕ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ರವರು ಭದ್ರಾವತಿಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಯುವ ದೃಷ್ಟಿಯಿಂದ ಸುರಕ್ಷತೆಗಾಗಿ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಿ ಕ್ರಮಕೈಗೊಳ್ಳುವುದು ಸೇರಿದಂತೆ ಸುಗಮ ಸಂಚಾರಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುವುದು.ಇದಕ್ಕಾಗಿ ಸಾರ್ವಜನಿಕರು ಹಾಗೂ ವರ್ತಕರ ಸಹಕಾರವೂ ಅಗತ್ಯ ಎಂದು ತಿಳಿಸಿದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ