ಕಲ್ಬುರ್ಗಿ:ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮತ್ತು ಪ್ರಾದೇಶಿಕ ವಿದ್ಯಮಾನಗಳನ್ನು ಪತ್ರಿಕೆಗಳ ಹಾಗೂ ಯೂಟ್ಯೂಬ್ ಮುಖಾಂತರ ಸಮಾಜದಲ್ಲಿ ಹಲವಾರು ನೈಜ ಘಟನೆಗಳನ್ನು ಬಿತ್ತರಿಸುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಎತ್ತಿ ತೋರಿಸಿ ಸರಿದಾರಿಗೆ ತರುವ ಕೆಲಸ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದವರು ಮಾಡುತ್ತಿದ್ದಾರೆ ಆದರೆ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕಿದೆ ತುಂಬಾ ಸಂತೋಷ ಆದರೆ ಹಗಲಿರುಳು ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಶಿಷ್ಟಾಚಾರ ನೀತಿ ನಿಯಮಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ದೃಶ್ಯಮಾಧ್ಯಮ ಮತ್ತು ಪತ್ರಿಕೆಗಳ ಮುಖಾಂತರ ಎತ್ತಿ ತೋರಿಸುವ ಪತ್ರಕರ್ತರಿಗೆ ಹಾಗೂ ದೃಶ್ಯಮಾಧ್ಯಮ ಸಂಪಾದಕರಿಗೆ ಹಾಗೂ ಮಳೆ ಗಾಳಿ ಚಳಿ ಎನ್ನದೆ ಮನೆ ಮನೆಗೂ ಪತ್ರಿಕೆಗಳನ್ನು ವಿತರಿಸುವ ಪತ್ರಿಕಾ ವಿತರಕರಿಗೂ ಸರಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗದಿರುವುದು ನೋವಿನ ಸಂಗತಿ ಹಾಗೂ ದುರ್ದೈವದ ಸಂಗತಿಯಾಗಿದೆ ಸರ್ಕಾರದ 4ನೇ ಅಂಗವೆಂದು ಭಾಷಣ ಬಿಗಿಯುವ ರಾಜಕಾರಣಿಗಳು ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಡುವ ಪತ್ರಿಕಾ ರಂಗಕ್ಕೆ ಹಾಗೂ ದೃಶ್ಯ ಮಾಧ್ಯಮದವರಿಗೆ ಸರಕಾರದಿಂದ ಯಾವುದೇ ರೀತಿಯಿಂದ ಕನಿಷ್ಠ ವೇತನ ಜಾರಿ ಮಾಡದಿರುವದು ಸಂವಿಧಾನ ಬಾಹಿರವಲ್ಲವೆ ಪತ್ರಿಕಾರಂಗಕ್ಕೆ ಸರ್ಕಾರ ಶೋಷಣೆ ಮಾಡಿದಂತಲ್ಲವೇ?ಕೂಡಲೇ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಾಧ್ಯಮ ವರ್ಗದವರಿಗೆ ಹಾಗೂ ದೃಶ್ಯ ಮಾಧ್ಯಮದವರಿಗೆ ಸರಕಾರ ಕನಿಷ್ಠ ವೇತನ ಜಾರಿಗೊಳಿಸಿ ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಡುವ ಪತ್ರಿಕಾ ಮಾಧ್ಯಮದವರಿಗೆ ಹಾಗು ದೃಶ್ಯ ಮಾಧ್ಯಮದವರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕನಕ ಕಾರ್ಮಿಕ ಕಲ್ಯಾಣ ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಮಲ್ಲಣ್ಣ ಎಂ ಪೂಜಾರಿ (ಬಿಳವಾರ) ಅವರು ಪತ್ರಿಕಾ ಪ್ರಕಟಣೆಯ ಮುಖಾಂತರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.