ಕಲ್ಬುರ್ಗಿ:ಕರ್ನಾಟಕ ರಾಜ್ಯದಲ್ಲಿಯೇ ಜೇವರ್ಗಿ ತಾಲೂಕು ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಜೇವರ್ಗಿ ಕೂಡಾ ಒಂದು.ಈಗ ಸರ್ಕಾರ ಕಲ್ಬುರ್ಗಿ ಜಿಲ್ಲೆಗೆ ಪ್ರಮುಖ ನಾಲ್ಕು ಸಿಮೆಂಟ್ ಕಂಪನಿಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹವಾಗಿದ್ದು ನಾಲ್ಕರಲ್ಲಿ ಹಿಂದುಳಿದ ಜೇವರ್ಗಿ ತಾಲೂಕಿನಲ್ಲಿ ಒಂದು ಸಿಮೆಂಟ್ ಕಂಪನಿ ನಿರ್ಮಾಣ ಮಾಡಿದರೆ ಇದರಿಂದ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಳಚಿ ದೇಶಾಂತರ ಗುಳೆ ಹೋಗುವ ದುಡಿಯುವ ವರ್ಗಕ್ಕೆ ಕೆಲಸ ನೀಡಿದಂತಾಗುತ್ತದೆ ಹಾಗೂ ಸಿಮೆಂಟ್ ಕಂಪನಿಗೆ ಬೇಕಾಗುವ ಸಾಮಗ್ರಿಗಳು,ಕಚ್ಚಾ ವಸ್ತುಗಳು ನಮ್ಮ ತಾಲೂಕಿನ ರದ್ದೇವಾಡಗಿ,ಗವನಳ್ಳಿ,ಕೊಳಕುರ,ಹಂದನೂರ್, ಕೂಡಿ ದರ್ಗಾ ವ್ಯಾಪ್ತಿಯಲ್ಲಿ ಸಂಗಾವಿ ಮದರಿ ಹೋನಗುಂಟ ನರಿಬೋಳ ಆಂದೋಲಾ ಭಾಗದಲ್ಲಿ ಅವರಾದ ಕೆಲ್ಲೂರ ಸೇರಿದಂತೆ ಅನೇಕ ಕಡೆ ಕಲ್ಲು ಗಣಿ ಇರುವ ತುಂಬಾ ಏರಿಯಾ ತಾಲೂಕಿನ ಭಾಗದಲ್ಲಿ ಇದೆ ಆದ್ದರಿಂದ ಇದರಿಂದಲೇ ಈ ಹಿಂದೆ ಜೇವರ್ಗಿಯಲ್ಲಿ ಕಲಬುರ್ಗಿ ರಸ್ತೆಯಲ್ಲಿ ಮೀಕ್ ಸಿಮೆಂಟ್ ಕಂಪನಿ ನಿರ್ಮಾಣವಾಗಿತ್ತು ಇದರಿಂದ ತಾಲೂಕಿನ ಜನ ಸಂತೋಷ ಪಟ್ಟಿದ್ದರು ಆದರೆ ಈ ಕಂಪನಿ ಕೇವಲ ಲೋನ್ ಅಪ್ಲೈಗೆ ಮಾತ್ರ ಸೀಮಿತ ಎಂದು ಗೊತ್ತಾದಾಗ ತಾಲೂಕಿನ ಜನತೆಗೆ ತುಂಬಾ ನಿರಾಶೆಯಾಯಿತು ಈಗ ರಾಜ್ಯ ಸರ್ಕಾರ ಜಿಲ್ಲೆಗೆ ಪ್ರಮುಖ ನಾಲ್ಕು ಸಿಮೆಂಟ್ ಕಂಪನಿಗಳ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದು ನಮ್ಮ ಭಾಗದಲ್ಲಿ ಅತಿ ಹಿಂದುಳಿದ ಜೇವರ್ಗಿ ತಾಲೂಕಿನಲ್ಲಿ ಸಿಮೆಂಟ್ ಕಂಪನಿ ನಿರ್ಮಾಣ ಮಾಡಲು ಈ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಕ್ಷೇತ್ರ ಜಿಲ್ಲೆಯ ಜನಪ್ರತಿನಿಧಿಗಳು ಇತ್ತ ವಿಶೇಷ ಗಮನಹರಿಸಿ ಜೇವರ್ಗಿ ತಾಲೂಕಿನಲ್ಲಿ ಸಿಮೆಂಟ್ ಕಂಪನಿ ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ವಿಶ್ವನಾಥ್ ಪಾಟೀಲ್ ಗೌವನಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.