ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್ ನಿರೀಕ್ಷಕರಾದ ಶ್ರೀ ಸುನೀಲ್ ಕುಮಾರ್ ಹೆಚ್ ಇವರ ಸಮ್ಮುಖದಲ್ಲಿ ಅಪರಾಧ ತಡೆ ಮಾಸಾಚರಣೆ ಮಾಡಲಾಯಿತು.ಸಾರ್ವಜನಿಕರು ಒಂದಕ್ಕಿಂತ ಹೆಚ್ಚು ದಿವಸ ಮನೆಗೆ ಬೀಗ ಹಾಕಿಕೊಂಡು ಹೋಗುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಸಾರ್ವಜನಿಕರು ಮನೆಯ ಕಿಡಿಕಿ ಮತ್ತು ಬಾಗಿಲಲ್ಲಿ ಬೆಳೆಬಾಳುವ ವಸ್ತುಗಳ ಹಿಡಿದಂತೆ ಎಚ್ಚರ ವಹಿಸಬೇಕು ಬ್ಯಾಂಕಿನಿಂದ ಹಣವನ್ನು ತರುವಾಗ ಬೇರೆ ಗಮನಸೆಳೆದು ವಂಚಿಸುವ ಅಪರಿಚಿತರೊಂದಿಗೆ ಎಚ್ಚರಿಕೆ ವಹಿಸಬೇಕು ನಕಲಿ ಬಂಗಾರದ ನಾಣ್ಯಗಳು ನೀಡಿ ವಂಚಿಸುವವರ ಬಗ್ಗೆ ಕೂಡಲೇ ಇಲಾಖೆಯ ಗಮನಕ್ಕೆ ತರಬೇಕು ತುತ್ತು ಸಂದರ್ಭದಲ್ಲಿ ಒಂದೊಂದು ಕರೆ ಮಾಡಬೇಕು ಅಪರಿಚಿತರೊಂದಿಗೆ ಮಾತನಾಡಲು ಮೊಬೈಲ್ ಅನ್ನು ಕೊಡಬಾರದು ಅಪರಿಚಿತರಿಗೆ ಡ್ರಾಪ್ ಮಾಡಲು ಸಹ ವಾಹನವನ್ನು ನೀಡಬಾರದು 18 ವರ್ಷ ವಯಸ್ಸಿನ ಒಳಗಿನ ಅವರಿಗೆ ವಾಹನ ಚಾಲನೆ ಮಾಡಲು ಪೋಷಕರು ನೀಡಬಾರದು ನಿಮ್ಮ ಮನೆಗೆ ಬಾಡಿಗೆ ಬರುವ ವ್ಯಕ್ತಿಗಳ ಬಗ್ಗೆ ಸಂಪೂರ್ಣ ವಿವರ ಹಾಗೂ ಫೋಟೋವನ್ನು ತೆಗೆದಿಟ್ಟುಕೊಳ್ಳಬೇಕು ನಿಮ್ಮ ಮಕ್ಕಳು ಅಪರಿಚಿತರೊಂದಿಗೆ ಹೋಗುವುದಾಗಲೀ ಅಥವಾ ಅವರು ಕೊಟ್ಟ ತಿನಿಸುಗಳನ್ನು ತೆಗೆದುಕೊಳ್ಳದಂತೆ ಮಕ್ಕಳಿಗೆ ತಿಳುವಳಿಕೆ ನೀಡುವುದು ರಾತ್ರಿ ವೇಳೆ ಯಾರಾದರೂ ಬಾಗಿಲನ್ನು ಬಡಿದರೆ ಅವರು ನಿಮ್ಮ ಪರಿಚಿತರೆ ಎಂದು ಖಚಿತಪಡಿಸಿಕೊಂಡು ಅನುಮಾನವಿದ್ದರೆ ಪೊಲೀಸ್ ರಿಗೆ ಮಾಹಿತಿ ನೀಡುವುದು ಸಾರ್ವಜನಿಕರು ಸಾಧ್ಯವಾದಷ್ಟು ತಮ್ಮ ಮನೆಗಳಿಗೆ ಅಂಗಡಿಗಳಿಗೆ ಸಿಸಿಟಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವರದಿ ಪ್ರಭಾಕರ್ ಡಿಎಂ