ಮಂಗಳೂರು(ಚೇಳ್ಯಾರು)ಡಿಸೆಂಬರ್ 20: ಶತಮಾನ ಕಂಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಎಂ.ಆರ್.ಪಿ.ಎಲ್/ ಓ.ಎನ್.ಜಿ.ಸಿ ಯಿಂದ ಕೊಡಲ್ಪಟ್ಟ,ರೂಪಾಯಿ ಮೂವತ್ತು ಲಕ್ಷ ಅನುದಾನದಿಂದ ಕಟ್ಟಲು ಉದ್ದೇಶಿತ ನೂತನ ಕಟ್ಟಡಕ್ಕೆ ಇಂದು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.ಮುಲ್ಕಿ ಮೂಡಬಿದರೆ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಅವರು ತಮ್ಮ ದಿವ್ಯ ಹಸ್ತದಿಂದ ಶಿಲಾನ್ಯಾಸ ಗೈದರು ತಮ್ಮ ಶುಭ ಸಂದೇಶದಲ್ಲಿ ಒಂದು ಸಮಯ ಇದೇ ಶಾಲೆಯಲ್ಲಿ ನಾಲ್ಕುನೂರು ಮಕ್ಕಳಿಂದ ತುಂಬಿದ್ದ ಶಾಲೆ ಇವತ್ತು ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸುತ್ತಿದೆ ಸರಕಾರ ಮತ್ತು ಕೈಗಾರಿಕಾ ಸಂಸ್ಥೆಗಳು ಜೊತೆಯಾಗಿ ಶಾಲೆಗೆ ಬೇಕಾದ ಸವಲತ್ತುಗಳನ್ನು ಪೂರೈಸಬಹುದು ಆದರೆ ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಶಾಲಾ ಅಧ್ಯಾಪಕ ವರ್ಗ ಮತ್ತು ಪೋಷಕರ ಜವಾಬ್ದಾರಿ ಪ್ರಮುಖ ಪಾತ್ರ ವಹಿಸುತ್ತದೆಂದು ಅವರು ಹೇಳಿದರು. ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ನಾಗರಾಜ್ ಮತ್ತು ಶ್ರೀಮತಿ ಪವಿತ್ರ ರವರು ಕೂಡಾ ಶಿಲಾನ್ಯಾಸ ವಿಧಿ ನೆರವೇರಿಸಿಕೊಟ್ಟರು ಗ್ರಾಮಪಂಚಾಯತ್ ಅಧ್ಯಕ್ಷ ಶ್ರೀ ಜಯಾನಂದ ಕಾರ್ಯಕ್ರಮ ನಿರೂಪಿಸಿದರು ಧಾರ್ಮಿಕ ವಿಧಿಯನ್ನು ಶ್ರೀ ಸೂರ್ಯನಾರಾಯಣ ಹೆಬ್ಬಾರ್ ನೆರವೇರಿಸಿದರು. ಶಾರದಾ ವಿದ್ಯಾ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ವೀಣಾ.ಟಿ.ಶೆಟ್ಟಿ ಅವರ ಪರಿಶ್ರಮದಿಂದ ಈ ಅನುದಾನ ಪಡೆಯುವಲ್ಲಿ ಸಾಧ್ಯವಾಯಿತು, ಅವರು ಕೂಡಾ ಶಿಲಾನ್ಯಾಸ ವಿಧಿ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಶಾಲಾಕ್ಷಿ ಶಿಲಾನ್ಯಾಸ ವಿಧಿ ನೆರವೇರಿಸಿದರು.ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀ ರಾಜ ಅವರು ಶ್ರೀ ನಾಗರಾಜ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು ಗುತ್ತಿಗೆದಾರ ಶ್ರೀ ವೆಂಕಟೇಶ ಶೆಟ್ಟಿ ಅವರು ಶಿಲಾನ್ಯಾಸ ಕಾರ್ಯಕ್ರಮದ ಎಲ್ಲಾ ತಯಾರಿ ಮಾಡಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಿದರು. ಗ್ರಾಮಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ರೇಖಾ, ಮಾಜಿ ಅಧ್ಯಕ್ಷ ಶ್ರೀ ಪುಷ್ಪರಾಜ ಶೆಟ್ಟಿ,ಟ್ರಸ್ಟ್ ನ ಕೋಶಾಧಿಕಾರಿ ಶ್ರೀ ಸುಧಾಕರ ಶೆಟ್ಟಿ,ಕಾರ್ಯದರ್ಶಿ ಚಂದ್ರಶೇಖರ ಹೆಬ್ಬಾರ್ ಕೊಲ್ಯ,ಸದಸ್ಯರಾದ ಶ್ರೀ .ಶ್ರೀನಿವಾಸ ಅಮೀನ್,ಶ್ರೀ ಪ್ರತಾಪ್ ಶೆಟ್ಟಿ,ಶ್ರೀ ದಿವಾಕರ ಶೆಟ್ಟಿ,ಶ್ರೀರಾಜೇಶ್ ಶೆಟ್ಟಿ,ಶ್ರೀ ದೀಪಕ್ ಕೊಲ್ಯ,ಶ್ರೀಮತಿ ಕೃಷ್ಣವೇಣಿ,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ ಶ್ರೀಮತಿ ಜ್ಯೋತಿ, ಉಪನ್ಯಾಸಕ ಶ್ರೀ ಚಂದನಾಥ್,ಶ್ರೀಮತಿ ಶೋಭಾ ಶರ್ಮ ಮತ್ತುಉಪನ್ಯಾಸಕ ವರ್ಗ,ಅಧ್ಯಾಪಕಿ ಶ್ರೀಮತಿ ಸುರೇಖಾ,ಕು.ಮಣಿತ,ಶ್ರೀಮತಿ ದೀಪ, ಶ್ರೀಮತಿ ಪವಿತ್ರ ಆರ್ ಶೆಟ್ಟಿ,ಶ್ರೀಮತಿ ಸುನೀತಾ, ಅಂಗನವಾಡಿ ಅಧ್ಯಾಪಕಿ ಶ್ರೀಮತಿ ವಂದನಾ,ನೆಚ್ಚಿನ ವಿದ್ಯಾರ್ಥಿಗಳು,ಪೋಷಕರು ಮತ್ತು ಸಹಾಯಕ ವರ್ಗ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.