ವಡಗೇರಾ:ಗಣಿತ ಇಷ್ಟಪಟ್ಟು ಕಲಿಯುವವರಿಗೆ ಅತಿ ಸರಳವಾದ ವಿಷಯ ಇದಾಗಿದೆ ಗಣಿತ ವಿಷಯದ ಬಗ್ಗೆ ಮಕ್ಕಳಲ್ಲಿ ಭಯ ಬೇಡ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಡಗೇರಾ ತಾಲೂಕು ಅಧ್ಯಕ್ಷ ಶಂಕ್ರಪ್ಪ ಗೊಂದೇನೂರ ಹೇಳಿದರು.ಶ್ರೀನಿವಾಸ್ ರಾಮಾನುಜನ್ ಅಯ್ಯಂಗಾರ್ ಅವರ ಜನ್ಮದಿನದ ಅಂಗವಾಗಿ ವಡಗೇರಾ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಲಿಯುವ ಆಸಕ್ತಿ ಛಲವಿದ್ದಾಗ ಎಲ್ಲಾ ಭಾಷೆಗಳು ಅತಿ ಸರಳವಾಗಿರುತ್ತವೆ ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಈಗಾಗಲೇ ಪರೀಕ್ಷೆಗಳು ಹತ್ತಿರ ಬರುತ್ತಿದ್ದು ವಿದ್ಯಾರ್ಥಿಗಳು ಹೆಚ್ಚು ಸಮಯ ಓದಿಗಾಗಿ ಮೀಸಲಿಟ್ಟು ಈ ಬಾರಿ ಉತ್ತಮ ಫಲಿತಾಂಶ ಪಡೆದು ತಾಲೂಕು ಜಿಲ್ಲೆಗೆ ಕೀರ್ತಿ ತರುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು ಈ ಸಮಯದಲ್ಲಿ ಮಕ್ಕಳು ಗಣಿತ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಿ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ವಸತಿ ಶಾಲೆ ಪ್ರಾಂಶುಪಾಲರಾದ ಶಾಂತಾ ಸಜ್ಜನ್.ಡಿ.ಡಿ.ಯು.ಶಾಲೆಯ ಮುಖ್ಯ ಗುರುಗಳಾದ ಸತೀಶ್ ಶಿಕ್ಷಕರಾದ ಬೀರಪ್ಪ ಸಂಕಿನ, ಅಪ್ಪಾಸಾಬ್.ಕೆ ಅಬ್ದುಲ್ ಭಾಷಾ,ಬಸವರಾಜ್ ಪಾಟೀಲ್ ಹೊರಟೂರ,ಆಶೀರ್ವಾದ,ಮಂಜುಳಾ. ನೀತಿ ಪಾಟೀಲ್,ಭಾಗ್ಯಶ್ರೀ,ಪ್ರತಿಭಾ,ಭರತೇಶ್ವರಿ,ಮಮತಾ ಹಾಗೂ ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,
ವರದಿ:ಶಿವರಾಜ ಸಾಹುಕಾರ್ ವಡಗೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.