ಹನೂರು:ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ನಡೆದ 2023-24 ನೇ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು.
ಕುಡಿಯುವ ನೀರಿನ ಬಗ್ಗೆ ಹಾಗೂ ದನಕರುಗಳಿಗೆ ಮೇವಿನ ಬಗ್ಗೆ,ಕೃಷಿ ಇಲಾಖೆ ಆರೋಗ್ಯ ಇಲಾಖೆಯ ಬಗ್ಗೆ ಹಾಗೂ ಇತರ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಅದಲ್ಲದೆ ಮುಂದಿನ ದಿನಗಳಲ್ಲಿ ಭರ ಪರಿಸ್ಥಿತಿ ಇದೆ ರೀತಿ ಮುಂದುವರಿದಾಗ ಎದುರಿಸಲು ಇದಕ್ಕೆ ಸಂಂಧಪಟ್ಟಂತೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇವೆ,ಅದೇ ರೀತಿ ಸಾಕಷ್ಟು ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು ಅದನ್ನು ಬಗೆ ಹರಿಸಲು ಬೇಕಾಗಿರುವ ಅನುದಾನದ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದೇವೆ,ಅದೇ ರೀತಿ ಕೃಷಿ ಇಲಾಖೆ ತುಂತುರು ನೀರಾವರಿ ಘಟಕಕ್ಕೆ ಬೇಕಾಗಿರುವ 78.2 ರಷ್ಟು ಅನುದಾನದ ಬಗ್ಗೆಯೂ ಸಹ ಪಟ್ಟಿ ಮಾಡಲಾಗಿದೆ ರೈತರಲ್ಲದವರನ್ನು ಹೊರತುಪಡಿಸಿ ಅರ್ಹ ರೈತರಿಗೆ ಸವಲತ್ತು ಗಳನ್ನು ತಲುಪಿಸಲು ಸೂಚನೆಯನ್ನು ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲಿಯು ಬರ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಜನಸಾಮಾನ್ಯರ ಸಹಕಾರದೊಂದಿಗೆ ಮುಂದೆ ನಾವು ಎಂತ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗೃತಾ ಕ್ರಮಕ್ಕೆ ನಾವು ಸಜ್ಜಾಗಿದ್ದೇವೆ ಎಂಬುದನ್ನು ತಿಳಿಸಿದರು,ಅದೇ ರೀತಿ ನಾಳೆಯೂ ಸಹ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಅದರಲ್ಲಿ ನಮಗೆ ಬೇಕಾಗಿರುವ ಅನುದಾನದ ಕೇಳಲು ಸಜ್ಜಾಗಿದೇವೆ ಎಂದರು.
ನಾಳೆ ಇದರ ಬಗ್ಗೆ ತೀರ್ಮಾನವನ್ನು ತೆಗೆದುಕೊಂಡು ಜನರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದರು.
ಅದೇ ರೀತಿಯಲ್ಲಿ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮುಂಜಾಗೃತಾ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದರು,
ನಮ್ಮ ತಾಲ್ಲೂಕಿಗೆ ಆದಷ್ಟು ಬೇಗ ನೂರು ಬೆಡ್ಡಿನ ಆಸ್ಪತ್ರೆಯನ್ನು ಮಾಡಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ ಎಲ್ಲಾ ರೀತಿಯಲ್ಲಿ ಅಧಿಕಾರಿಗಳು ಜನ ಸಾಮಾನ್ಯರ ರಕ್ಷಣೆ ಅಧಿಕಾರಿಗಳು ಧಾವಿಸುವಂತೆ ಸೂಚಿಸಲಾಸಿದೆ,ನಮ್ಮ ತಾಲ್ಲೂಕಿಗೆ ನೂರು ಬೆಡ್ಡಿನ ಆಸ್ಪತ್ರೆಗಳು ಇಲ್ಲದೆ ಇರುವ ಕಾರಣ ಕೊಳ್ಳೆಗಾಲ,ಚಾಮರಾಜನಗರ,ಮೈಸೂರು,ಅಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅದಕ್ಕೆ ಕೈಗೊಳ್ಳುತ್ತೇವೆ , ಹೊರ ರಾಜ್ಯ ಗಳಿಗೆ ಮೇವುಗಳನ್ನು ಸಾಗಣೆ ಮಾಡುಟ್ಟಿರುವುದನ್ನು ಗಡಿ ಭಾಗದ ಚೆಕ್ ಪೋಸ್ಟ್ ಗಳಿಗೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು ಆದ್ದರಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹ ಸಹಕಾರ ನೀಡಬೇಕು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕರಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವೈ.ಕೆ ಗುರುಪ್ರಸಾದ್,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಉಮೇಶ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ವಹಣಾ ಅಧಿಕಾರಿ ರವೀಂದ್ರ,ಚೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಶಂಕರ್,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸುಂದ್ರಮ್ಮ,ತೋಟಗಾರಿಕೆ ಸಹಾಯಕ ನಿರ್ದೇಶಕರು ವಿನುತಾ,ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಂಜು, ನಂಜುಂಡಯ್ಯ,ಕಂದಾಯ ಇಲಾಖೆಯ ಅಧಿಕಾರಿ ಶಿವಕುಮಾರ್,ವಸತಿ ಸಂಯೋಜಕ ಶಿವಪ್ರಕಾಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್