ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರೈತರು ಸಾವಯವ ಕೃಷಿಯಲ್ಲಿ ತೊಡಗಿ:ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನವೀನ್ ಕುಮಾರ್

ತುಮಕೂರು/ತಿಪಟೂರು:ರೈತರು ರಾಸಾಯನಿಕ ಗೊಬ್ಬರದ ಕೃಷಿಗೆ ಮಾರು ಹೋಗದೆ ಸಾವಯವ ಕೃಷಿಯ ಮೂಲಕ ಉತ್ತಮ ಆರೋಗ್ಯ ಪಡೆಯಬೇಕಾಗಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ನವೀನ್ ಕುಮಾರ್ ತಿಳಿಸಿದರು ಅವರು ಗೊರಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ರೈತ ದಿನ ಕಾರ್ಯಕ್ರಮದಲ್ಲಿ ರೈತರ ಸಮಗ್ರ ಅಭಿವೃದ್ಧಿಯ ವಿಷಯ ಕುರಿತು ಉಪನ್ಯಾಸ ನೀಡಿ,ಉತ್ತಮವಾದ ಬೆಳೆ ಬೆಳೆದಾಗ ಲಾಭ ಖಂಡಿತವಾಗಿ ಬರುತ್ತದೆ,ಮಳೆ ಅವಲಂಬಿತ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯಳನಾಡು ಗೋಶಾಲೆಯ ಶ್ರೀಗುರುಗಳು ಮಾತನಾಡುತ್ತಾ ಪ್ರತಿ ಮನೆಯಲ್ಲಿಯೂ ದೇಶಿ ಹಸುಗಳನ್ನು ಸಾಕುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ, ಗಂಜಲ ಮತ್ತು ಗೋಮಯದಿಂದ ಆರೋಗ್ಯ ವೃದ್ದಿಸಿಕೊಳ್ಳಬಹುದಾಗಿದೆ ಎಂದರು,
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಎಸ್.ಫ್.ಕಮಾಂಡರ್ ಯೋಧ ಶಿವಣ್ಣ ಮಾಯಸಂದ್ರರವರು ಮಾತನಾಡುತ್ತಾ ಯೋಧನ ಅವಶ್ಯಕತೆ,ಈ ದೇಶಕ್ಕೆ ರೈತನಷ್ಟೇ ಇದೆ,ಈ ಇಬ್ಬರು ಭಾರತ ಮಾತೆಯ ಕಣ್ಣುಗಳಿದ್ದಂತೆ ಎಂದರು. ಟಿ.ಎ.ಪಿ.ಎಂ.ಸಿ.ಎಸ್.ನ ಅಧ್ಯಕ್ಷರಾದ ಹೆಚ್.ಬಿ.ನಾಗರಾಜು ಮಾತನಾಡಿ ಜೈ ಜವಾನ್ ಮತ್ತು ಜೈ ಕಿಸಾನ್,ಎಂಬ ನಾಣ್ಣುಡಿಗೆ ಅರ್ಥ ಬರಬೇಕೆಂಬ ಹಿನ್ನೆಲೆಯ ರೈತ ದಿನಾಚರಣೆಯ ಅಂಗವಾಗಿ ರೈತರನ್ನು ಮತ್ತು ಸೈನಿಕರನ್ನು ಸ್ಮರಿಸುವ ಕೆಲಸ ನಮ್ಮ ಸಹಕಾರ ಸಂಘದ ವತಿಯಿಂದ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ರಾದ ಹೆಚ್.ಸಿ.ರಾಜಶೇಖರಯ್ಯ ಮಾತನಾಡುತ್ತಾ ರೈತ ಮತ್ತು ಸೈನಿಕ ನಮ್ಮ ದೇಶದ ಎರಡು ಕಣ್ಣುಗಳಿದಂತೆ ಆದ್ದರಿಂದ ಪ್ರತಿಯೊಬ್ಬರು ಈ ಇಬ್ಬರನ್ನು ತಪ್ಪದೇ ಪ್ರತಿದಿನ ಸ್ಮರಿಸಬೇಕೆಂದರು.ಈ
ಕಾರ್ಯಕ್ರಮದಲ್ಲಿ 8 ಜನ ರೈತರನ್ನು ಸನ್ಮಾನಿಸಲಾಯಿತು,ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು, ಸದಸ್ಯರುಗಳು,ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ