ಹನೂರು: 1980 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಒಬ್ಬರೇ ಸಂಸದರಾಗಿ ಆಯ್ಕೆಯಾಗಿದ್ದ ಸಂಧರ್ಭದಲ್ಲಿ ಪಾರ್ಲಿಮೆಂಟ್ ಸಭಾಂಗಣ ಆವರಣದಲ್ಲಿ ಆಡಳಿತ ಪಕ್ಷದವರು ಒಬ್ಬರೇ ಬಿಜೆಪಿ ಸಂಸದರು ಎಂದು ನಗೆ ಚಟಾಕಿ ಹಾರಿಸಿದರು ಆಗ ಆಡಳಿತ ಪಕ್ಷದ ಸಂಸದರಿಗೆ ಒಂದಲ್ಲ ಒಂದು ದಿನ ನಮ್ಮ ಬಿಜೆಪಿ ಕೇಂದ್ರದಲ್ಲಿ ಹೆಚ್ಚಿನ ಸಂಸದರು ಆಯ್ಕೆಯಾಗಿ ಭಾರತ ದೇಶವನ್ನ ಆಳುತ್ತೇವೆ ಎಂದು ಅಂದಿನ ಆಡಳಿತ ಪಕ್ಷದ ಸಂಸದರಿಗೆ ತಿರುಗೇಟು ನೀಡಿದ್ದರು ಎಂದು ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಮಾಜಿ ಶಾಸಕ ಬಾಲರಾಜ್ ರವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99 ನೇ ಜನ್ಮ ದಿನದ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ಸಿಹಿ ಹಂಚಿ ಮಾತನಾಡಿದ ಅವರು ನಮ್ಮ ಭಾರತ ದೇಶ
ಅಣ್ವಾಸ್ತ್ರ ಪ್ರಯೋಗ ಮತ್ತುವಿಜ್ಞಾನ.ಕ್ರೀಡಾ ಸಾಂಸ್ಕೃತಿಕ ವ್ಯವಸಾಯ ಆಹಾರ ಉತ್ಪಾದನೆ ಇನ್ನಿತರ ನಮ್ಮ ಭಾರತ ದೇಶ ಮುಂದೆ ಇದೆ ಇದಕ್ಕೆಲ್ಲ ಮಾಜಿ ಪ್ರಧಾನಿ ವಾಜಪೇಯಿ ಮತ್ತು ನಮ್ಮ ನೆಚ್ಚಿನ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಯವರು ಕಾರಣ,ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಸತತ ಎರಡು ಬಾರಿ ಪ್ರಧಾನಮಂತ್ರಿಯಾಗಿ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೇ ಪ್ರಧಾನಿಯಾಗುವುದು ಸತ್ಯ ನಮ್ಮ ದೇಶ ಅಭಿವೃದ್ಧಿ ಗಾಗಿ ಭಯೋತ್ಪಾದಕ ಹಾಗೂ ಭ್ರಷ್ಟಮುಕ್ತ ಆಡಳಿತ ನೀಡುತ್ತಿದ್ದಾರೆ ನಮ್ಮ ಭಾರತ ದೇಶದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಇಡೀ ವಿಶ್ವದ ಪ್ರಧಾನ ಮಂತ್ರಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ ನಮ್ಮ ದೇಶವನ್ನ ಪ್ರಪಂಚವೇ ತಿರುಗಿ ನೋಡುವಂತೆ ಆಡಳಿತ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದಪ್ಪ,ಬಿಜೆಪಿ ರಾಷ್ಟ್ರೀಯ ಸದಸ್ಯರಾದ ವೆಂಕಟ ಸ್ವಾಮಿ,ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರು ಹಾಗೂ ಪೀ ಎಲ್ ಡಿ ಬ್ಯಾಂಕ್ ನಿರ್ದೇಶಕರು ವೆಂಕಟೆ ಗೌಡ,,ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಸುರೇಶ.ಮಂಗಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಕನಕ ರಾಜ್ , ನಾಗರಾಜು ,ನಿಂಗರಾಜು ಮಂಟ್ಯ. ಸೂಜಿ. ರಣಧೀರ. ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.