ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ನಿನ್ನೆ ಶ್ರೀ ಮಾರುತೇಶ್ವರ ಸ್ವಾಮಿಯ 10ನೇ ವರ್ಷದ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.
ಡಣಾಪೂರ ಗ್ರಾಮದಲ್ಲಿ ಹಬ್ಬದ ಸಡಗರ,ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು ತಮ್ಮ ಹರಕೆಯಂತೆ ದೀಡ್ ನಮಸ್ಕಾರ ಹಾಕಿದರು ಹಾಗೂ ಸಂಜೆ ವೇಳೆ ದೇವಸ್ಥಾನದಲ್ಲಿ ಎಲೆ ಎರಿಸುವ ಮೂಲಕ ಅಲಂಕಾರ ಹಾಗೂ ದೈವದ ಕಾರ್ಯಕ್ರಮಗಳು ಜರುಗಿದವು ಬಳಿಕ ಶ್ರೀ ಮಾರುತೇಶ್ವರ ಮೂರ್ತಿಯನ್ನು ತುಂಗಾ ಭದ್ರ ನದಿಯ ದಡಕ್ಕೆ ಬೆಳಗ್ಗೆ ಎರಡು ಗಂಟೆಗೆ ತೆರಳಿ ಮೂರ್ತಿ ಪೂಜಾ ಬಳಿಕ ದೇವಸ್ಥಾನದ ಮುಂಭಾಗದಲ್ಲಿನ ಅಗ್ನಿ ಕೊಂಡದಲ್ಲಿ ಪಲ್ಲಕ್ಕಿಯ ಮೆರವಣಿಗೆ ಸಾಂಪ್ರದಾಯಿಕ ಕಾರ್ಯದ ಬಳಿಕ ಗ್ರಾಮದ ಭಕ್ತಾದಿಗಳಿಂದ ನಂತರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆಯು ಸುಗಮವಾಗಿ ಜರುಗಿತು.
