ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕಿಯಾಗಿ ತರಬೇತಿ ಪಡೆಯುತ್ತಿದ್ದ ಹರ್ಷ ತೇಜಸ್ವಿನಿ ಎಂಬ ಹೆಣ್ಣು ಮಗಳಿಗೆ ಕಳೆದ ಒಂದುವರೆ ವರ್ಷಗಳಿಂದ ಮಾನಸಿಕವಾಗಿ ಹಾಗೂ ತುಂಬಾ ಕೀಳು ಮಟ್ಟದಲ್ಲಿ ಶೌಚಾಲಯ ಸ್ವಚ್ಛಗೊಳಿಸು ಎಂದು ಹೇಳುವುದು,ಜಾತಿಯ ಕಾರಣಕ್ಕೆ ಅವಮಾನಿಸುವುದು ಇಂತಹ ನಡವಳಿಕೆಗಳಿಂದ ನಮ್ಮ ಸಮಾಜ ತಲೆತಗ್ಗಿಸುವಂಥಾಗಿದೆ,ಭಾರತ ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಹಾಗೂ ಅಸ್ಪೃಶ್ಯತೆಯ ಆಚರಣೆ ನಿರ್ಮೂಲನೆ ಆಗಬೇಕೆಂದು 1950ರಲ್ಲಿ ಡಾ.ಬಿಆರ್ ಅಂಬೇಡ್ಕರ್ ಅವರು ನಿಖರವಾಗಿ ತಿಳಿಸಿದ್ದಾರೆ,ಜ್ಞಾನ ದೇಗುಲವಾಗಬೇಕಿದ್ದಂತಹ ವಿದ್ಯಾಸಂಸ್ಥೆಯಲ್ಲಿ ಇಂತಹ ಅನಿಷ್ಟ ಪದ್ದತಿ ಜೀವಂತವಾಗಿರುವುದು ನಿಜಕ್ಕೂ ಮಾನವ ಸಮಾಜ ತಲೆತಗ್ಗಿಸುವಂತದ್ದು, ಸಂಶೋಧಕಿಯಾಗಿ ತನ್ನ ಜೀವನವನ್ನು ಅಮೂಲ್ಯವಾಗಿ ಉಜ್ವಲ ಭವಿಷ್ಯವನ್ನು ನೋಡಬೇಕಾದಂತಹ ಹುಡುಗಿಗೆ ಈ ರೀತಿ ಮಾನಸಿಕ ಹಿಂಸೆ ಕೊಟ್ಟು ಅವರನ್ನು ಕುಗ್ಗಿಸುವ ರೀತಿ ವರ್ತನೆ ತೋರಿಸುತ್ತಿರುವ ಮಾರ್ಗದರ್ಶಕ ಈಗಾಗಲೇ ಈ ವಿಷಯ ಆದಾರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚರಣೆ ಆಗುತ್ತಿದೆ ಇನ್ನೂ ಸಹ ಈ ಅವಿವೇಕಿಯನ್ನ ಜಾತಿವಾದಿ ಬುದ್ದಿ ಮನಸ್ಥಿತಿ ಹಾಗೆ ಇದ್ದು ಇಂತಹವರನ್ನು ಮೈಸೂರು ವಿಶ್ವವಿದ್ಯಾನಿಲಯ ಉಳಿಸಿಕೊಂಡಿರುವುದು ವಿಪರ್ಯಾಸವೇ ಸರಿ, ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಈ ರೀತಿ ಆ ಹುಡುಗಿಗೆ ಮಾನಸಿಕ ಹಿಂಸೆ ಕೊಡುತ್ತಿರುವುದು ಅಮಾನವೀಯ ಸನ್ನಿವೇಶವೆನಿಸುತ್ತದೆ,ಇಂತಹ ಮಾರ್ಗದರ್ಶಕರನ್ನ ಕೂಡಲೇ ಅಮಾನತುಗೊಳಿಸಿ,ಆ ನೊಂದ ವಿದ್ಯಾರ್ಥಿಗೆ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕಾಗಿರುವುದು ಕುಲಪತಿಗಳದವರ ಆದ್ಯ ಕರ್ತವ್ಯ ಆದರೆ ಕುಲಪತಿಯವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ಕೊಡದಿರುವುದು ನಮ್ಮ ಈ ಪ್ರಜಾಪ್ರಭುತ್ವಕ್ಕೆ ಅವರು ಮಾಡುವ ಅಪಮಾನವೆಂದರೆ ಸರಿ…
-ಕಾರ್ತಿಕ್ ಜಿ.ಎನ್. ವಕೀಲರು (ಎಲ್ ಎಲ್ ಎಂ, ವಿದ್ಯಾರ್ಥಿ)