ಬೆಳಗಾವಿ:ಬಡತನದ ವಿಷವರ್ತುಲ ಎಂಬ ಸರಪಳಿಯ ಕೊಂಡಿ ಬಿಡಿಸಲು ತಾಯಿ ಮತ್ತು ಮಕ್ಕಳ ಆರೈಕೆ ಮುಖ್ಯವಾಗಿದೆ.ಈ ನಿಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಕೂಸಿನ ಮನೆ’ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ತಾ.ಪಂ ನರೇಗಾ ಸಹಾಯಕ ನಿರ್ದೇಶಕರಾದ ಯು ಹೆಚ್ ಸೋಮಶೇಖರ ವ್ಯಕ್ತಪಡಿಸಿದರು.
ಕಿತ್ತೂರು ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಉದ್ಘಾಟನೆ ಕಾರ್ಯಕ್ರಮದಲ್ಲಿ ಚಿಣ್ಣರಿಗೆ ಸಿಹಿ ತಿನಿಸಿ ಮಾತನಾಡಿದರು.
ಮಹಾ ನಗರ ಪ್ರದೇಶಗಳಲ್ಲಿ ಮಾತ್ರ ಪ್ಲೇ ಹೋಂ ಗಳನ್ನು ಇದ್ದವು.ಇದೀಗ ರಾಜ್ಯ ಸರಕಾರ ಬಡವರ ಮಕ್ಕಳನ್ನು ಆರೈಕೆ ಮಾಡಲು ಗ್ರಾ.ಪಂ ಒಂದರಂತೆ ಕೂಸಿನ ಮನೆ ತೆರೆಯುತ್ತಿದೆ.ಈ ಕೇಂದ್ರಗಳಲ್ಲಿ ಆಟಿಕೆ ಸಾಮಾನು ಹಾಗೂ ಇಬ್ಬರು ಮಹಿಳಾ ಕೇರ್ ಟೇಕರ್ಸ್ ಅವರು ಇರುತ್ತಾರೆ.ಬಡತನದ ಕುಟುಂಬಗಳು ಕೂಸಿನ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋದರೆ ಮಹಿಳಾ ಕೇರ್ ಟೇಕರ್ಸ್ ಅವರು ಮಕ್ಕಳನ್ನು ನೋಡಿಕೊಳ್ಳುತ್ತಾರೆ ಎಂದರು ಮಕ್ಕಳ ಆರೈಕೆದಾರರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಕೇಂದ್ರದಲ್ಲಿ ಮಗುವಿಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು ಕಲಿಕೆಗೆ ಪೂರಕ ಮಾಹಿತಿ ನೀಡುತ್ತಾ ಮಕ್ಕಳು ಕೇಂದ್ರದತ್ತ ಖುಷಿಯಿಂದ ಬರುವಂತೆ ನೋಡಿಕೊಳ್ಳಬೇಕು ಎಂದರು.
ಕೂಸಿನ ಮನೆಗೆ ಬರುವ ಚಿಣ್ಣರ ಸಂಪೂರ್ಣ ವ್ಯಕ್ತಿತ್ವ ವಿಕಸನವಾಗುವ ನಿಟ್ಟಿನಲ್ಲಿ ಮಹಿಳಾಕೇರ್ ಟೇಕರ್ಸ್ ಅವರು ಕಾರ್ಯ ನಿರ್ವಹಿಸಬೇಕು ನರೇಗಾ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಮಹಿಳಾಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಮಕ್ಕಳು ದೇವರಿಗೆ ಸಮ ಮಕ್ಕಳ ಬೆಳವಣಿಗೆ ಲಾಲನೆ ಪಾಲನೆ ತಂದೆ ತಾಯಿ ಕೆಲಸವಾದರೆ,ಅಕ್ಷರ ಜ್ಞಾನ, ಶಿಸ್ತು ಸಂಸ್ಕಾರ,ಸಂಸ್ಕೃತಿ ಶಿಕ್ಷಕರು ನೀಡುತ್ತಾರೆ ಎಂದು ತಾಲೂಕು ಪ್ಲಾನಿಂಗ್ ಆಫೀಸರ್ ನವೀನ ಕುಮಾರ ತಿಳಿಸಿದರು.
ಈ ವೇಳೆ ಮತ್ತಿಹಳ್ಳಿ ಗ್ರಾಪಂ ಅಧ್ಯಕ್ಷರಾದ ಸಿ ಸಣ್ಣ ಹೊನ್ನಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಗ್ರಾಪಂ ಪಿಡಿಓ ಕೆ ಹಾಲಪ್ಪ, ಕಾರ್ಯದರ್ಶಿಗಳಾದ ಸಾಗರ ಜಿ ಎನ್,ಆಪರೇಟರ್ ದ್ಯಾಮನಗೌಡ,ಮೇಟಿಗಳಾದ ಕೆ ದಕ್ಷಿಣಮೂರ್ತಿ, ಮಂಜುನಾಥ,ಕೊಟ್ರೇಶ,ಕವಿತಾ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹಳೇ ಮನೆ ಕೊಟ್ರಮ್ಮ ಸದಸ್ಯರಾದ ಶ್ರಾವಣ ಗೌಡ,ಮಂಜುನಾಥ,ಹನುಮಂತಪ್ಪ ಪ್ರಕಾಶ, ಶಿವಣ್ಣ,ಮಲ್ಲಮ್ಮ ಹಾಗೂ ಸರ್ವ ಸದಸ್ಯರು,ಗ್ರಾಪಂ ಸಿಬ್ಬಂದಿಗಳು,ಗ್ರಾಮದ ಮುಖಂಡರು,ಅಂಗನವಾಡಿ, ಆಶಾ ಕಾರ್ಯಕರ್ತರು,ಮಹಿಳಾ ಕೇರ್ ಟೇಕರ್ಸ್ ಅವರುಗಳು ಹಾಜರಿದ್ದರು.