ಕಲಬುರಗಿ:ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಡಾವಣೆಯಲ್ಲಿ ಈಗಾಗಲೇ ಸರಕಾರದಿಂದ ಐಎಸ್ಐ ಅನುಮತಿಯನ್ನು ಪಡೆದ 16 ಘಟಕಗಳು ಶುದ್ಧವಾದ ಕುಡಿಯುವ ನೀರು ಪುರೈಕೆ ಮಾಡುತ್ತಿದ್ದು,ಆದರೆ ಸರಕಾರದ ಅನುಮತಿ ಇಲ್ಲದೇ 21 ಘಟಕಗಳು ನವೀಕರಿಸದೇ ಇರುವ ಘಟಕಗಳು ಹಾಗೂ ಅನಧಿಕೃತ ಕುಡಿಯುವ ನೀರಿನ ಘಟಕದ ವಾಹನ ಮೂಲಕ ಸಾಗಣೆ ಮಾಡುತ್ತಿರುವ ಘಟಕಗಳು ಎಂದು ಕರವೇ ಕಾವಲುಪಡೆ ಜಿಲ್ಲಾಧ್ಯಕ್ಷ ಮಂಜುನಾಥ ಎಸ್ ನಾಲವರಕರ್ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.ನಂತರ ಅಪರ ಜಿಲ್ಲಾಧಿಕಾರಿಗಳು ಒಟ್ಟು 63 ಕುಡಿಯುವ ನೀರಿನ ಘಟಕಗಳು ಅನಧಿಕೃತವಾಗಿ ನೀರು ಪುರೈಕೆ ಮಾಡುತ್ತಿರುವ ಘಟಕದ ವಿರೋಧ ಆಹಾರ ಸುರಕ್ಷತಾ ಗುಣಮಟ್ಟದ ಪ್ರಾಧಿಕಾರದ ಕಾಯ್ದೆ 2011ರ ಸೆಕ್ಷನ್ 58ರ ಅಡಿ ಪ್ರತಿವಾದಿಗಳ ವಿರುದ್ಧ ಪಿರ್ಯಾದುದಾರರು ದಾಖಲು ಮಾಡಿ ಈ ನ್ಯಾಯಲಯಕ್ಕೆ ಸಲ್ಲಿಸಿದ್ದಾರೆ,ಸದರಿ ಪ್ರಕರಣಗಳ ವಿರುದ್ಧ ವಿಚಾರಣೆಗಾಗಿ ಪ್ರತಿವಾದಿಗಳಿಗೆ ನೋಟಿಸ್ ನೀಡಿ ವಿಚಾರಣೆಯನ್ನು ದಿನಾಂಕ 20-5-2023 ರಂದು ಪ್ರತಿವಾದಿಗಳ ಸಮಕ್ಷಮದಲ್ಲಿ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಯ ಅಧಿಕಾರಿಗಳು ಅಂತಿಮ ತೀರ್ಮಾನವನ್ನು ಹೊರಡಿಸಿದ್ದಾರೆ ತೀರ್ಮಾನದಲ್ಲಿ ಹೊರಡಿಸಿದಂತೆ ರೂ,50,000/-ದಂಡವನ್ನು ವಿಧಿಸಲಾಗುತ್ತದೆ ದಂಡದ ಮೊತ್ತವನ್ನು ಪಾವತಿ ಮಾಡಲುವ 15 ದಿನಗಳ ಕಾಲವಕಾಶ ನೀಡಿರುತ್ತಾರೆ ಆದರೆ ಆಹಾರ ಸುರಕ್ಷತಾ ಗುಣಮಟ್ಟ ಕಾಯ್ದೆ ಸೆಕ್ಷಸ್ 96 ರ ಅಡಿ ಕಾನೂನುಕ್ರಮ ಕ್ಕೆಗೊಳ್ಳಲು ಸೂಚಿಸಿರುತ್ತಾರೆ ಆದರೆ ಆಹಾರ ಸುರಕ್ಷತಾ ಗುಣಮಟ್ಟದ ಪ್ರಾಧಿಕಾರದ ನಿರೀಕ್ಷಕರಾದ ಪರಮೇಶ್ವರ ಮಠಪತಿ ಹಾಗೂ ಕಿರಣ ಚಲವಾದಿ ರವರು ಸರಕಾರಕ್ಕೆ ಮೋಸ ಮಾಡಿ,ಸುಮಾರು 30,000/-ಹಣವನ್ನು ಪಡೆದು ಚಾರಿಟೇಬಲ್ ಟ್ರಸ್ಟ್ ಮಾಡುವ ಮೂಲಕ ಕಲಬುರಗಿ ನಗರದ ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡದೇ,ಇರುವ ಘಟಕಗಳ ಮಾಲೀಕರಿಗೆ ಸಹಾಯ ಮಾಡುತ್ತಿರುವ ಈ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಲು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಕರವೇ,ಕಾವಲುಪಡೆ ನಿಯೋಗ ಮನವಿ ಮಾಡಲಾಯಿತು,ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜುನಾಥ ನಾಲವಾರಕರ್,ಜಿಲ್ಲಾ ಕಾರ್ಯಾಧ್ಯಕ್ಷರಾದ ಪ್ರಹ್ಲಾದ ಹಡಿಗಿಲಕರ್,ಜಿಲ್ಲಾ ಗೌರವಧ್ಯಕ್ಷರಾದ ರವಿ,ವಾಲಿ,ಸೇರಿದಂತೆ ಇನ್ನಿತರರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.