ಬೆಂಗಳೂರು:ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಯುವ ನಾಯಕ ನಿರುಪಾದಿ ಕೆ ಗೋಮರ್ಸಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು ಪಕ್ಷದ ವತಿಯಿಂದ ಇಂದು ನಡೆದ ಸಂದರ್ಶನದಲ್ಲಿ ಪಾಲ್ಗೊಂಡು ನಂತರ ಪತ್ರಿಕಾ ಹೇಳಿಕೆ ನೀಡಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುವುದು ನನ್ನ ಗುರಿ ಭ್ರಷ್ಟಚಾರ ಮುಕ್ತ,ಲಂಚ ಮುಕ್ತ,ಮದ್ಯಪಾನ ಮುಕ್ತ ಕೊಪ್ಪಳ ಕ್ಷೇತ್ರದ ನಿರ್ಮಾಣವೇ ನಮ್ಮ ಪಕ್ಷದ ಗುರಿ ಮತ್ತು ಉದ್ದೇಶ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜೆಸಿಬಿ (ಜೆಡಿಎಸ್ ಕಾಂಗ್ರೆಸ್) ಸಂಸದರು ವಿಫಲರಾಗಿದ್ದು,ಜಾತಿ ರಾಜಕಾರಣ,ಹಣಬಲದ ತೋಳು ಬಲದ ರಾಜಕಾರಣವನ್ನು ಮೀರಿ ಸಾರ್ವಜನಿಕರ ಪರವಾದ ರಾಜಕಾರಣಕ್ಕೆ 2024 ರ ರಾಜ್ಯದ 28 ಲೋಕಸಭಾ ಚುನಾವಣೆಗೆ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂದರ್ಶನ ನಡೆಯುತ್ತಿದೆ.
ಪಕ್ಷದ ತತ್ವ ಸಿದ್ಧಾಂತ ನೀತಿ ನಿಯಮಗಳಿಗೆ ಅನುಗುಣವಾಗಿ ಪ್ರಾಮಾಣಿಕ ಜನಪರ ರಾಜಕಾರಣಕ್ಕಾಗಿ ದುಡಿಯುವ ನಾಯಕರ ಹುಡುಕಾಟ ಪಕ್ಷ ನಡೆಸುತ್ತಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ,ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್.ಎಚ್,ಸಂಘಟನಾ ಕಾರ್ಯದರ್ಶಿಗಳಾದ ರಘುಪತಿ ಭಟ್,ಬಸಪ್ಪ ಕುಂಬಾರ,ಅಕ್ಷಯ್,ಚಂದ್ರಶೇಖರ್ ಮಟದ,ಮಂಜುನಾಥ್,ಆನಂದ,ಮೂರ್ತಿ ಸೇರಿದಂತೆ ಇನ್ನುಳಿದ ಪಕ್ಷದ ಮುಖಂಡರು ಸೇರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.