ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಇವತ್ತಿನ ರಾಜಕಾರಣ ಅಂದಿನಂತಿಲ್ಲ ಎಲ್ಲಡೆ ಕಲುಷಿತ ವಾತವರಣ ನಿರ್ಮಾಣಗೊಳ್ಳುತ್ತಿದೆ:ಶಾಸಕ ಲಕ್ಷ್ಮಣ ಸವದಿ

ಬೆಳಗಾವಿ/ಅಥಣಿ:ಇವತ್ತಿನ ರಾಜಕಾರಣ ಅಂದಿನಂತಿಲ್ಲ ಎಲ್ಲಡೆ ಕಲುಷಿತ ವಾತವರಣ ನಿರ್ಮಾಣಗೊಳ್ಳುತ್ತಿದೆ ಅಂದು ನಮ್ಮಗಳ ಪಕ್ಷಗಳು ಬೇರೆ ಬೇರೆ ಆಗಿದ್ದರೂ ಒಬ್ಬರು ಇನ್ನೊಬ್ಬರ ಮನೋಭಾವನೆಗಳನ್ನು ಅರಿಯುವ ಮತ್ತು ಗೌರವಿಸುತ್ತಾ ಗೆಳೆಯರ ನಡುವೆ ಸಂಘರ್ಷಗಳಿಗೆ ಅವಕಾಶ ಇರುತ್ತಿರಲಿಲ್ಲ ಆದರೆ ಇಂದು ಆ‌ ವಾತವರಣ ಉಳಿದು ಕೊಂಡಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಜರುಗಿದ ಕಾಂಗ್ರೇಸ್ ಮುಖಂಡ ದಿ.ಅಪ್ಪಸಾಹೇಬ ದೇಸಾಯಿಯವರ ಸ್ಮಣಾರ್ಥವಾಗಿ ಅವರ ಅಣ್ಣ ರಚನೆಯ ವಿರಚಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು ಇಂದು ಮನುಷ್ಯ‌ ಸ್ವಾರ್ಥ ಮತ್ತು ಸಂಕುಚಿತ ಭಾವನೆ ಹೊಂದಿದ ಕಾರಣದಿಂದ ಜೀವನ ವ್ಯವಸ್ಥೆ ಹಾಳಾಗುತ್ತಿದೆ.ಇಂದು ರಾಜಕಾರಣದಲ್ಲಿ ಐಶ್ವರ್ಯದ ಆರಾಧನೆ ಮತ್ತು ದುರಾಸೆಯ ಬೆನ್ನು ಹತ್ತಿ ಹೊರಟಿದೆ ನಮ್ಮಲ್ಲಿ ಸದ್ವಚಾರ ಮೌಲ್ಯಗಳನ್ನು ಎತ್ತಿ ಹಿಡಿದಾಗ ಮಾತ್ರ ದುಷ್ಟ ಶಕ್ತಿಗಳ ಪ್ರಾಬಲ್ಯ ಕಡಿಮೆ ಆಗಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಅಪ್ಪಾಸಾಹೇಬ ದೇಸಾಯಿ ವಿಶ್ವಾಸರ್ಹ ರಾಜಕಾರಣಿ,ಗೆಳತನಕ್ಕೆ ಅತೀ ಗೌರವ ಕೊಡುವ ವ್ಯಕ್ತಿಯಾಗಿದ್ದರು ಸ್ಥಳೀಯ ಚುನಾವಣೆ ಸಮಯದಲ್ಲಿ ಸಹಕಾರಿಯಾಗಿದ್ದ ಸ್ನೇಹ ಜೀವಿ ನಿಷ್ಕಳಂಕ ಭಾವ ಬಡವರ ಕುರಿತು ಅವರಿಗೆ ಅತ್ಯಂತ ಅನುಕಂಪ ಇರುತ್ತಿತ್ತು ಮನಸ್ಸಿನಲ್ಲಿ ಎಂದು ಕಪಟತನ ವಿರಲಿಲ್ಲ.ಇಂತಹ ವ್ಯಕ್ತಿಯ ಜೀವನ ಕುರಿತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಗಳಾಗಿರುವದು ಹೆಮ್ಮೆಯನ್ನುಂಟು ಮಾಡಿದೆ ಎಂದರು.
ಈ ವೇಳೆ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ ರಾಜಕಾರಣಿಗಳ ಬದುಕು ಅಂದಿನಂತಿಲ್ಲ ವಿಶ್ವಾರ್ಹ ರಾಜಕಾರಣ ಮಾಡುವುದು ದುಸ್ಥರವಾಗಿದೆ ನಾವು ನಮ್ಮ ಬದುಕು ಮನೆಗೆ,ಸಮಾಜಕ್ಕೆ ಗೌರವ ತರುವ ರೀತಿಯಲ್ಲಿ ಬದುಕಬೇಕು ಸಮಾಜ ಹೌದಹೌದು ಅನ್ನುವಂತೆ ಬದುಕಬೇಕು ಎಂದರು.ಶೇಗುಣಿಸಿಯ ಡಾ.ಮಹಾಂತಪ್ರಭು ಮಹಾಸ್ವಾಮಿಗಳು ಆರ್ಶಿವಚನ ನೀಡಿದರು.ಪ್ರೊ.ಸುಬ್ಬರಾಯ ದೇಸಾಯಿ,ಕುಸುಮಾ ದೇಸಾಯಿ,ರಮೇಶ ಪಾಟೀಲ್,ರಾವಸಾಬ ಜಕನೂರ,ಮಲ್ಲಿಕಾರ್ಜುನ ದೇಸಾಯಿ,ಸದಾಶಿವ ಸಖಗೌಡ,ಮಲಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ