ವಾಸನೆ ಗುರುತಿಸಲು ಮೂಗು ಕೊಟ್ಟ
ರುಚಿಯ ಅಸ್ವಾದಿಸಲು ನಾಲಿಗೆಯ ಇಟ್ಟ
ನೋಟ ನೋಡಲು ಅಕ್ಷಿ ಯನ್ನಿಟ್ಟ
ಗ್ರಹಿಸಲು ಕರ್ಣನನ್ನು ಮನುಜನಿಗಿಟ್ಟ.I೧I
ಉಣ್ಣಲು,ಕಾಯ ಮಾಡಲು ಕೈ ಇತ್ತ
ನಡೆಯಲು,ಓಡಲು ಕಾಲನಿತ್ತ
ಒಬ್ಬೊಬ್ಬರಿಗೂ ಒಂದೊಂದು ಚಹರೆಯನ್ನಿತ್ತ
ರೂಪವೂ ಮುಖ್ಯವೇ ಇಲ್ಲಾ ಗುಣವೇ ಉದಾತ್ತ.I೨I
✍🏻ದೇವರಾಜು ಬಿ ಎಸ್ ಹೊಸಹೊಳಲು.
ಕಾವ್ಯನಾಮ:ಅರಸು