ಕೊಟ್ಟೂರು:ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗವನ್ನು ಪಡೆಯುವುದು ಬಹಳ ಕಷ್ಟಕರ ಇಂತಹ ಸಂದರ್ಭದಲ್ಲಿ ದೇಶಪಾಂಡೆ ಉದ್ಯೋಗ ತರಬೇತಿ ಸಂಸ್ಥೆ ನಮ್ಮ ಮಹಾವಿದ್ಯಾಲಯದಲ್ಲಿ ಉದ್ಯೋಗವನ್ನು ಪಡೆಯುವ ನಿಟ್ಟಿನಲ್ಲಿ ತರಬೇತಿ ನೀಡುವ ಒಡಂಬಡಿಕೆ ಮಾಡಿಕೊಂಡು ಕೌಶಲ್ಯ ಆಧಾರಿತ ಉದ್ಯೋಗವನ್ನು ನೀಡಲು ಬಂದಿರುವುದು ಶ್ಲಾಘನೀಯ ಎಂದು ಪ್ರಾಚಾರ್ಯ ಡಾ.ಎಂ.ರವಿಕುಮಾರ್ ತಿಳಿಸಿದರು. ಕೊಟ್ಟೂರೇಶ್ವರ ಮಹಾವಿದ್ಯಾಲಯ ಹಾಗೂ ದೇಶಪಾಂಡೆ ಕೌಶಲ್ಯ ತರಬೇತಿ ಸಂಸ್ಥೆ ಹುಬ್ಬಳ್ಳಿ ಇವುಗಳ ಸಹಭಾಗಿತ್ವದಲ್ಲಿ ಬಿ ಎ,ಬಿಕಾಂ,ಬಿ ಎಸ್ ಸಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ಕಾರ್ಯಗಾರ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಮಾತನಾಡಿದರು ಕಳೆದ ಮೂರು ವರ್ಷಗ ಳಿಂದ ಈ ಸಂಸ್ಥೆಯ ತರಬೇತಿಯನ್ನು ಪಡೆದು ನಮ್ಮ ಮಹಾವಿದ್ಯಾಲಯದ ಸುಮಾರು ನೂರಾರು ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿರುವುದು ನಮ್ಮ ಕಾಲೇಜಿನ ಹೆಮ್ಮೆಯ ಸಂಗತಿ.ವಿದ್ಯಾರ್ಥಿಗಳಾದ ತಾವುಗಳು ಕೂಡ ಈ ಸಂಸ್ಥೆಯ ವತಿಯಿಂದ ತರಬೇತಿಯ ನ್ನು ಪಡೆದು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಿ ಎಂದರು. ತರಬೇತಿ ನಿರ್ದೇಶಕ ರಮೇಶ್ ಚಿಕ್ಕೇರಿ,ಪ್ರೇಮಾ ಜಿಎಂ,ಸಂಯೋಜಕ ಪ್ರೊ.ಕೃಷ್ಣಪ್ಪ,ಪ್ಲೇಸ್ಮೆಂಟ್ ಆಫೀಸರ್ ಡಾ.ಚೇತನ್ ಚೌಹಾನ್,ಉಪನ್ಯಾಸಕರಾದ ಪ್ರೊ.ರವೀಂದ್ರ ಗೌಡ,ಪ್ರೊ.ರಾಧಾ ಸ್ವಾಮಿ,ಡಾ.ಶಿವಕುಮಾರ್,ನೂರುಲ್ಲಾ,ರಮೇಶ್ ಎಚ್.ಕೂಡ್ಲಿಗಿ ಕೊಟ್ರೇಶ್,ಬಸವರಾಜ ಬಣಕಾರ್ ಅರವಿಂದ್,ವಿ ಕೊಟ್ರೇಶ್,ರೂಪ ಮತ್ತು ವಿದ್ಯಾರ್ಥಿಗಳಿದ್ದರು.
ವರದಿ-ವೈ.ಮಹೇಶ್ ಕುಮಾರ್