ಪ್ರಸ್ತುತ ನಮ್ಮ ರಾಜ್ಯದ ಸ್ಪೀಕರ್ ಆಗಿರುವ ಯು.ಟಿ.ಖಾದರ್ ರವರು ಕಳೆದ ವಾರ ನಮ್ಮ ರಾಜ್ಯದ ವಿದ್ಯಾರ್ಥಿಗಳನ್ನ ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪಲ್ಲ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ ಇಂತಹ ಹೇಳಿಕೆ ವಿದ್ಯಾರ್ಥಿಗಳಿಗೆ ಅಪಮಾನ ಮಾಡುವಂತಿದೆ,ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗೂ ಮಕ್ಕಳೆಂದರೆ ದೇಶದ ಭವಿಷ್ಯವೆಂದರ್ಥ ಆದರೆ ಇಂತಹ ಕೆಟ್ಟ
ಮನಸ್ಥಿತಿಯನ್ನ ಹೊಂದಿರುವ ವ್ಯಕ್ತಿಯನ್ನು ಸ್ಪೀಕರ್ ಆಗಿ ನೇಮಕವಾಗಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವೇ ಸರಿ,ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳೆಂದರೆ ಯಾಕಿಷ್ಟು ಕೀಳು ಮನೋಭಾವನೆ ಎಂಬ ಪ್ರಶ್ನೆ ಉದ್ಭವಿಸುತ್ತದೆ, ನಮ್ಮ ಮಕ್ಕಳನ್ನ ಕೇವಲ ಶೌಚಾಲಯ ಸ್ವಚ್ಛಗಳಿಸುವುದಕ್ಕೆ ಸೀಮಿತಗೊಳಿಸುವುದು ಎಷ್ಟು ಸರಿ,ಇವರು ಒಬ್ಬ ಉನ್ನತ ಸ್ಥಾನದಲ್ಲಿ ಇದ್ದು ರಾಜ್ಯದ ಸ್ಪೀಕರ್ ಆಗಿರುವ ನೀವು ಇಂತಹ ಹೇಳಿಕೆಯನ್ನು ಸಮರ್ತಿಸಿಕೊಳ್ಳುವುದು ಎಷ್ಟು ಸರಿ,ಇನ್ನೂ ಸಹ ನಮ್ಮ ರಾಜ್ಯದ ಎಷ್ಟೋ ಶಾಲೆಗಳಲ್ಲಿ ಸರ್ಕಾರಿ ಸೌಲಭ್ಯಗಳು ನೇರವಾಗಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ, ನಾವು ನೋಡಬಹುದು ಇನ್ನು ಎಷ್ಟೋ ಗ್ರಾಮೀಣ ಭಾಗದಲ್ಲಿರುವ ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆಯೇ ಇರುವುದಿಲ್ಲ,ಫ್ಯಾನ್ ಹಾಗೂ ಊಟದ ವ್ಯವಸ್ಥೆ ಮತ್ತು ಕಲಿಕಾ ಪದ್ಧತಿಯೇ ಸರಿಯಾಗಿಲ್ಲ, ರಾಜ್ಯದ ಅನೇಕ ಕಡೆ ಎಷ್ಟು ಸಾರ್ವಜನಿಕ ಶಾಲೆಗಳಿಗೆ ಸರಿಯಾದ ಬಣ್ಣ ವ್ಯವಸ್ಥೆ ಹಾಗೂ ಉತ್ತಮ ಕಟ್ಟಡ ವ್ಯವಸ್ಥೆಗೆ ಸರಿಯಾಗಿಲ್ಲ,ಇಂತಹದನ್ನ ಅಭಿವೃದ್ಧಿ ಮಾಡಬೇಕಾದ ಸ್ಪೀಕರ್ ಅವರು ಇಂತಹ ಕೆಟ್ಟ ಮನಸ್ಥಿತಿಯಿಂದ ವಿದ್ಯಾರ್ಥಿಗಳನ್ನು ಕುರಿತು ಈ ರೀತಿ ಮಾತನಾಡಿರುವುದು ವಿದ್ಯಾರ್ಥಿಗಳ ಜೀವನ ಸ್ವಾತಂತ್ರ್ಯ ಮತ್ತು ವಿದ್ಯಾಭ್ಯಾಸ ಸ್ವಾತಂತ್ರ್ಯಕ್ಕೆ ಧಕ್ಕೆಯಾದಂತಹ ಹೇಳಿಕೆ ಇದಾಗಿರುತ್ತದೆ ಇವರ ಇಂತಹ ಹೇಳಿಕೆಗೆ ನನ್ನ ಧಿಕ್ಕಾರವಿರಲಿ…
-ಕಾರ್ತಿಕ್ ಜಿ.ಎನ್ ವಕೀಲರು,ಗುಂಡ್ಲುಪೇಟೆ.