ಯಾದಗಿರಿ:ಶ್ರೀಸಾಯಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನದ ಪ್ರಯುಕ್ತ ಶ್ರೀರಕ್ಷಾ ವಿದ್ಯಾಮಂದಿರ ಯಾದಗಿರಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶ್ರೀ ದೇವಪುತ್ರಪ್ಪ ಸಹ ಶಿಕ್ಷಕರು ಸಾವಿತ್ರಿಬಾಯಿ ಪುಲೆ ಯವರ ಜೀವನ ಚರಿತ್ರೆ ಕುರಿತು ಮಾತನಾಡಿದರು ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ,ಹೆಣ್ಣು ಅಬಲೆ ಅಲ್ಲ ಸಬಲೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಲ್ಲಾ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಾವಿತ್ರಿಬಾಯಿ ಪುಲೆ ಅವರೇ ಕಾರಣ ಎಂದು ಹೇಳಿದರು ಅದೇ ರೀತಿಯಾಗಿ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ವೆಂಕಟೇಶ ಸರ್ ಅವರು ಕೂಡಾ ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಣು ಮುಂದೆ ಬರಲು ಸಾವಿತ್ರಿಬಾಯಿ ಪುಲೆ ಅವರೇ ಕಾರಣ ಎಲ್ಲಾ ಮಕ್ಕಳು ಅವರ ಹಾದಿಯಲ್ಲಿ ನಡೆದು ಪ್ರತಿಯೊಂದು ಮನೆಯಲ್ಲಿ ಸಾವಿತ್ರಿ ಬಾಯಿ ಪುಳೆ ಅವರ ಮಾರ್ಗದರ್ಶನದಲ್ಲಿ ನಡೆಯಿರಿ ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ರಂಗನಾಥ ಬಾಗಲಿ,ಕಾಳಿಂಗಪ್ಪ ಹೊಸ್ಮನಿ,ವೆಂಕಟೇಶ್ ಶಿಕ್ಷಕರು ಹಾಗೂ ಇತರರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.