ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ತುಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪತ್ತೆಪುರ ಗ್ರಾಮದಲ್ಲಿ ಹೊಸ ಪ್ಲಾಟ್ ನ ಮುಖ್ಯ ರಸ್ತೆಯಲ್ಲಿ ಚರಂಡಿ ನೀರು ಸರಿಯಾಗಿ ಹರಿಯದೆ ಇದ್ದ ಕಾರಣ ಕ್ರಿಮಿ-ಕೀಟಗಳ ತಾಣವಾಗಿ ಮಾರ್ಪಟ್ಟಿದೆ
ಈ ಮುಖ್ಯ ರಸ್ತೆಯಲ್ಲಿ ದಿನಾಲೂ ನೂರಾರು ಜನ ಓಡಾಡುತಾ ಇದ್ದು,ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಚಿಕ್ಕ ಮಕ್ಕಳು,ಶಾಲಾ ಮಕ್ಕಳು,ವೃದ್ಧರು ತಿರಗಾಡಲಿಕ್ಕೆ ತುಂಬಾ ತೊಂದರೆಯಾಗಿದೆ.
ಗ್ರಾಮಸ್ಥರು ಮತ್ತು ಆ ದಾರಿಹೋಕರು ಸೇರಿ ಗ್ರಾಮ ಪಂಚಾಯತಿಯ ಗಮನಕ್ಕೆ ತಂದಾಗ ಒಂದು ಸಾರಿ ಬಂದು ಸ್ವಚ್ಛತೆ ಕಾರ್ಯಕ್ರಮ ಕೈಗೊಂಡಿದ್ದರು,ಆದ್ರೆ ಅದಕ್ಕೆ ಶಾಶ್ವತವಾಗಿ ಪರಿಹಾರ ಮಾಡಿರಲಿಲ್ಲ.
ಆದ್ರೆ ಮತ್ತೆ ಮೊದಲಿನ ತರ ಕೊಳಚೆ ಸ್ಥಿತಿ ಉಲ್ಬಣವಾಗಿದೆ ಆದ ಕಾರಣ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು,ಅಧ್ಯಕ್ಷರು,ಉಪಾಧ್ಯಕ್ಷರು,ಗ್ರಾಮದ ಪಂಚಾಯತ ಸದಸ್ಯರು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮಸ್ಥರು, ದಾರಿಹೋಕರು,ಅಲ್ಲಿನ ಸುತ್ತಮುತ್ತಲಿನ ಮನೆಯವರು ಆಗ್ರಹಿಸಿದ್ದಾರೆ.
ವರದಿ: ಉಸ್ಮಾನ ಬಾಗವಾನ