ಭದ್ರಾವತಿ:ಕ್ಷೇತ್ರದ ಜೀವನಾಡಿ ವಿಐಎಸ್ಎಲ್ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರ ತೆಗೆದುಕೊಂಡ ಅವಧಿ 2024ರ ಜ.16 ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ 16-1-2024ರಂದು “ಭದ್ರಾವತಿಯ ಕರಾಳ ದಿನ” ಎಂದು ಆಚರಿಸಲು ಗುತ್ತಿಗೆ ಕಾರ್ಮಿಕರ ಸಂಘವು ತೀರ್ಮಾನಿಸಿದೆ ಎಂದು ವಿಐಎಸ್ಎಲ್ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಹೆಚ್ ಜಿ ಸುರೇಶ್ ತಿಳಿಸಿದರು.
ಜ.16 ರಂದು ಸಂಜೆ 5 ಗಂಟೆಗೆ ಭದ್ರಾವತಿ ನಗರದ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.ವಿಐಎಸ್ಎಲ್ ಕಾರ್ಖಾನೆಯ ಮುಚ್ಚುವಿಕೆ ಸಂಬಂಧ ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಒಂದು ವರ್ಷ ಪೂರೈಸುತ್ತಿರುವ ಅಂಗವಾಗಿ 18-1-2024 ರಂದು ಮಧ್ಯಾಹ್ನ 1 ಗಂಟೆಗೆ ವಿಐಎಸ್ಎಲ್ ಕಾರ್ಖಾನೆಯ ಮುಖ್ಯ ದ್ವಾರದಿಂದ ಶಿವಮೊಗ್ಗ ನಗರದಲ್ಲಿರುವ ಸಂಸದ ಬಿ ವೈ ರಾಘವೇಂದ್ರ ರವರ ಮನೆಗೆ ಬೈಕ್ ರ್ಯಾಲಿ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು.
ಈ ಎರಡೂ ಮೆರವಣಿಗೆಯಲ್ಲಿ ಭದ್ರಾವತಿಯ ಸಮಸ್ತ ನಾಗರೀಕರು,ವಿವಿಧ ರಾಜಕೀಯ ಪಕ್ಷಗಳ ಮುಖಂಡರು,ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಎಲ್ಲಾ ಸಮುದಾಯದ ಮುಖಂಡರುಗಳು ಹಾಗೂ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗುತ್ತಿಗೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷರುಗಳಾದ ಹೆಚ್ ಜಿ ಸುರೇಶ್,ಕುಮಾರಸ್ವಾಮಿ, ಪದಾಧಿಕಾರಿಗಳಾದ ರಾಕೇಶ್,ವಿನೋದ್ ಕುಮಾರ್, ಮಂಜುನಾಥ್,ಗುಣಶೇಖರ್,ಎನ್ ಆರ್ ವಿನಯ ಕುಮಾರ್,ಐಸಾಕ್ ಲಿಂಕನ್,ಅಂತೋಣಿ ದಾಸ್,ಜಿ.ಆನಂದ್ ಉಪಸ್ಥಿತರಿದ್ದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ