ಕಲ್ಬುರ್ಗಿ:ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ವಿಕಲಚೇತನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅದಿನದಲ್ಲಿ ವಿಕಲಚೇತನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದೇ ರೀತಿಯಾಗಿ ಎಸ್ ಎಲ್ ಸಿ ಹಾಗೂ ನಂತರದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ನಂತಹ ವ್ಯವಸ್ಥೆ ಹಾಗೂ ದೈಹಿಕವಾಗಿ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ಮೋಟಾರು ದ್ವಿಚಕ್ರ ವಾಹನದಂತಹ ಸೌಲಭ್ಯ ಮತ್ತು ದೃಷ್ಟಿ ದೋಷ ಹೊಂದಿರುವಂತಹ ವ್ಯಕ್ತಿಗಳಿಗೆ ಬೆಲ್ಟ್ ಕಿಟ್ ನಂತಹ ಉಚಿತ ವ್ಯವಸ್ಥೆ ಹಾಗೂ ಶ್ರವಣದೋಷ ಹೊಂದಿರುವ ವ್ಯಕ್ತಿಗಳಿಗಾಗಿ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತದೆ ಇಂತಹ ಸೌಲಭ್ಯಗಳನ್ನು ಪಡೆಯಲು ವಿಶೇಷ ವಿಕಲಚೇತನರು ಸಾಧನ ಸಲಕರಣೆಗಾಗಿ ಆನ್ಲೈನ್ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಬೇಕಾದರೆ ಆಧಾರ್ ಕಾರ್ಡ್ ಪಡಿತರ ಚೀಟಿ ಜಾತಿ ಪ್ರಮಾಣ ಪತ್ರ ಹಾಗೂ udid ಕಾರ್ಡ್ ಈ ಎಲ್ಲಾ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅದೇ ರೀತಿಯಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಹಿತ ವಿಶೇಷವಾದಂತಹ ಸೌಲಭ್ಯಗಳಿದ್ದು ಪ್ರತಿಯೊಬ್ಬ ವಿಕಲಚೇತನರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರಿ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕಲ್ಬುರ್ಗಿ ಜಿಲ್ಲೆಯ ಜನತೆಗೆ ಕನಕ ಕಾರ್ಮಿಕ ಕಲ್ಯಾಣ ಸಂಘದ (ರಿ.)ರಾಜ್ಯಾಧ್ಯಕ್ಷರಾದ ಮಲ್ಲಣ್ಣ ಎಂ ಪೂಜಾರಿ ಬಿಳವಾರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.