ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಇಂದು ಡಣಾಪೂರದ ಆರಾಧ್ಯ ದೈವವಾಗಿರುವ ಶ್ರೀಮಾರುತೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಭಾವಚಿತ್ರ ಕ್ಕೆ ಪೂಜಾ ಹಾಗೂ ಅಭಿಷೇಕ ಸ್ವಾಮಿ ಅಯ್ಯಪ್ಪ ಹಾಡುಗಳನ್ನು ಹಾಗೂ ಭಜನೆಯಿಂದ ಅರ್ಪಿಸಿದರು.
ಈ ವೇಳೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಗುರುಸ್ವಾಮಿಯಾದ ಶೇಖರಯ್ಯ ಅವರಿಂದ ಇರುಮುಡಿ ಕಟ್ಟಲಾಯಿತು.ಇರುಮುಡಿ ಧರಿಸಿದ ಅಯ್ಯಪ್ಪ ಸ್ವಾಮಿಗಳು ಆಂಜನೇಯ್ಯ ಸ್ವಾಮಿ ದೇವಸ್ಥಾನವನ್ನು ಭಕ್ತಿಭಾವದಿಂದ ಭಜನೆವೈಭವದಲ್ಲಿ ಪ್ರದಕ್ಷಣೆ ಹಾಕಿದರು.
ಅ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ಸಂಜೆಯವೇಳಾ ಗ್ರಾಮದ ರಾಜಬೀದಿಯಲ್ಲಿ ಅಯ್ಯಪ್ಪ ಸ್ವಾಮಿಗಳು ಭಕ್ತಾಗಳು ಸಕಲವಾದ್ಯಗಳಿಂದ ಭಜನ ಭಜಂತ್ರಿಯಿಂದ ಮೆರವಣಿಗೆ ಸಾಗಿತು.
ಗುರುಸ್ವಾಮಿಯಾದ ದೇವಸಮುದ್ರದ ಶೇಖರಯ್ಯಸ್ವಾಮಿ ಅಯ್ಯಪ್ಪ ಮಾಲಾದಾರಿಗಳಾದ ಶರಣಪ್ಪ ಸ್ವಾಮಿ,ಅಂಜನೇಯ್ಯ ಸ್ವಾಮಿ,ಬಸವರಾಜ ಸ್ವಾಮಿ,ಪ್ರಶಾಂತ ಸ್ವಾಮಿ,ಪ್ರವೀಣ ಸ್ವಾಮಿ,ವೆಂಕಟೇಶ,ಜಗದೀಶ ಮೂಷ್ಟೂರ,ಹನುಮೇಶ ಸ್ವಾಮಿ,ರಾಹುಲ್ ಸ್ವಾಮಿ,ವರದರಾಜಸ್ವಾಮಿ ಮಣಿಕಂಠ ಸ್ವಾಮಿ ಇತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.