೧೨/೦೧/೧೮೬೩ ರಂದು
ಉದಯಿಸಿತ್ತೊಂದು ನಂದಾದೀಪ
ಅದು ಮಾನವ ರೂಪದ ಜ್ಞಾನದದೀಪ
ಮೊಳಗಿತು ಭಾರತಾಂಬೆಯ
ಸಂಸ್ಕೃತಿಯ ಝೇಂಕಾರ
ವಿಶ್ವಕ್ಕೆ ಸಾರಿದರು ಹಿಂದುಸ್ಥಾನದ ಚರಿತ್ರೆ ಸ್ವಾಮೀಜಿ ಧೈರ್ಯ ಸಹನೆ ತಾಳ್ಮೆ ಶಿಖರ ಹೆದರಲಿಲ್ಲ ನಿಂದಿಸಿ ಅವಮಾನ
ಅಪಹಾಸ್ಯಗೈದ ಅಂಗ್ಲರಿಗೆ
ಸ್ವಾಮಿಜಿ ಚಿತ್ತವಿತ್ತು ಗುರಿಸಾಧಿಸುವತ್ತ
ಇಂದು ಹಿತ್ತಲಿಗೆ ಹೋಗಲು ಹೆದರುವ ನಾವು
ಅಂದು ಕಾಣದ ದೇಶ ಅಮೇರಿಕಕ್ಕೆ ಹೊರಟರು
ಸ್ವಾಮೀಜಿ ಧೈರ್ಯ ಅದ್ಭುತ
ತಾಯಿ ಭುವನೇಶ್ವರಿಯ ಪ್ರೇಮದ ಪುತ್ರ ಸ್ವಾಮಿ ವಿವೇಕಾನಂದರ ಧೈರ್ಯ ಕಂಡು
ಕನ್ಯಾಕುಮಾರಿಯ ಬಂಡೆಯೂ
ಸುರಿಸಿತ್ತು ಆನಂದಬಾಷ್ವ
ಮನಕುಲ ಇರುವವರೆಗೂ ಮರೆಯದ ಮಾಣಿಕ್ಯ
ಈ ವೀರ ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದ
ಹುಟ್ಟು ಹಬ್ಬದ ಶುಭಾಶಯಗಳು.
-ವಿ.ಶ್ರೀನಿವಾಸ,ವಾಣಿಗರಹಳ್ಳಿ