ವಡಗೇರಾದ ಪಂಚಾಯತಿಯ ಎರಡನೇ ವಾರ್ಡ್ ನಲ್ಲಿರುವ ರಾಜೂಗೌಡ ಮುಸ್ತಾಜಿರ್ ರವರ ಮನೆ ಹತ್ತಿರ ಇರುವ ಬನದೇಶ್ವರ ಮಠ ದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ಕಾರ್ಡ್ (ಲೇಬರ್ ಕಾರ್ಡ್) ಹೊಂದಿದ ಫಲಾನುಭವಾಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸಿದ್ದು ಮುನಮುಟ್ಟಿಗಿ ಮುನ್ನೆಚ್ಚರಿಕಾ ಆರೋಗ್ಯ ರಕ್ಷಣೆ ಎಂದರೆ ಒಂದು ನಿರ್ಧಿಷ್ಟ ರೋಗ ಅದರ ಮುಂದಿನ ಹಂತವನ್ನು ಅಥವಾ ಯಾವುದೇ ರೋಗದ ಸಾಧ್ಯತೆಯನ್ನು ಮುಂಚಿತವಾಗಿ ಕಂಡು ಹಿಡಿದು, ಮುಂಜಾಗ್ರತೆ ಹಾಗೂ ಚಿಕಿತ್ಸೆ ಪಡೆದುಕೊಳ್ಳಲು ಕ್ರಮವಹಿಸುವ ವಿಧಾನ,ಹಾಗಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿವತಿಯಿಂದ ಆಯೋಜಿಸಿರುವ
ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಅನುಕೂಲಕ್ಕಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳಲಾಗಿದ್ದು ಇಂತಹ ಶಿಬಿರಗಳ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.ಈ ಕಾರ್ಯಕಮದಲ್ಲಿ ವಡಗೇರಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಂಗಮ್ಮಹುಲಿ,
ಸಿದ್ದು ಮುನುಮುಟ್ಟಿಗಿ,ನಾಗಪ್ಪ ಬಸಂತಪುರ್, ನಿಲಕಂಠಪ್ಪ ನೀಲ್ಲಹಳ್ಳಿ,ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಇತರರು ಉಪಸ್ಥಿತರಿದ್ದರು.
ವರದಿ:ಶಿವರಾಜ್ ಸಾಹುಕಾರ್ ವಡಗೇರಾ