ಕಲಬುರಗಿ:ಇನ್ನೇನು ರಾಮ ಮಂದಿರ ಉದ್ಘಾಟನೆಗೆ ಕೆಲವೇ ಕೆಲವು ದಿನಗಳು ಬಾಕಿ ಇದ್ದು,ಈ ಹಿನ್ನೆಲೆಯಲ್ಲಿ ಈಗಾಗಲೇ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಪ್ರತಿ ಊರಿಗೂ ತಲುಪುತ್ತಿದೆ.ಈ ಮಂತ್ರಾಕ್ಷತೆಯನ್ನು ಪ್ರತಿ ಮನೆಗೂ ತಲುಪಿಸುವ ಜವಾಬ್ದಾರಿಯನ್ನು ಸ್ವಯಂಸೇವಕರು ವಹಿಸಿಕೊಂಡಿದ್ದು ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ, ಅದರಂತೆಯೇ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಬೆಣ್ಣೂರ ಬಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕರಸೇವಕರು ಸೇರಿ ಅಯೋಧ್ಯೆಯಿಂದ ಬಂದಂತಹ ಮಂತ್ರಾಕ್ಷತೆ ಹಾಗೂ ಕರಪತ್ರಗಳಿಗೆ ಗ್ರಾಮದಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ,ನಂತರ ಪ್ರತಿ ಮನೆ ಮನೆಗಳಿಗೆ ತೆರಳಿ ವಿತರಿಸಿ ರಾಮಮಂದಿರದ ಬಗ್ಗೆ ಜಾಗೃತಿ ಮೂಡಿಸಿ ಮಂತ್ರಾಕ್ಷತೆಯನ್ನು ಹೇಗೆ ಉಪಯೋಗಿಸುವುದು?ಯಾವಾಗ ಉಪಯೋಗಿಸುವುದು?ಅದರ ಮಹತ್ವವೇನು? ಅದನ್ನು ತೆಗೆದುಕೊಂಡ ನಂತರ ಏನು ಮಾಡಬೇಕು ಎಂಬುದರ ಬಗ್ಗೆ ಜನರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಪಕ್ಷ, ಜಾತಿ,ಮತ ಎನ್ನದೇ ಎಲ್ಲರೂ ಒಗ್ಗಟ್ಟಾಗಿ ಸೇರಿ ರಾಮಮಂದಿರ ನಿರ್ಮಾಣದ ಐನೂರು ವರ್ಷಗಳ ಕನಸು ನನಸು ಮಾಡೋಣ ಎಂದು ಎಲ್ಲರಿಗೂ ತಿಳಿಸಿದರು.
ವರದಿ-ಅಪ್ಪಾರಾಯ ಬಡಿಗೇರ