ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರಾಷ್ಟ್ರೀಯ ಯುವದಿನಾಚರಣಾಸಂದೇಶ:ಸಮಾಜ ಹಿತಬಯಸುವವರು ಭೋದನಾರ್ಹರು

ದಕ್ಷಿಣ ಕನ್ನಡ/ಮಂಗಳೂರು(ಚೇಳ್ಯಾರು):ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಯುವದಿನಾಚರಣೆ ಆಚರಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಜ್ಯೋತಿ ಚೇಳ್ಯಾರು ವಹಿಸಿದ್ದರು.ಎಂ ಆರ್ ಪಿ ಎಲ್ ನ ಉದ್ಯೋಗಿ ಹಾಗೂ ಸ್ಪಂದನ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀ ಯತೀಶ್ ಮತ್ತು ಸ್ಟೀವನ್ ರೋಡ್ರಿಗೆಸ್ ರವರು ದೀಪ ಬೆಳಗಿಸಿ,ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿದರು ಲೆಕ್ಕಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಯವರ ಸ್ವಾಗತ ಭಾಷಣ ನಂತರ ಆಯ್ದ ವಿದ್ಯಾರ್ಥಿಗಳಿಗೆ ಶ್ರೀ ಸ್ಟೀವನ್ ಮತ್ತು ಯತೀಶ್ ರವರು ವಿದ್ಯಾರ್ಥಿ ವೇತನವನ್ನು ವಿತರಿಸಿದರು.ಶ್ರೀ ಸ್ಟೀವನ್ ರೋಡ್ರಿಗೆಸ್ ನಂತರ ತಮ್ಮ ಭಾಷಣದಲ್ಲಿ “ಸ್ಪಂದನ”ನಡೆದುಬಂದ ಹಾದಿಯನ್ನು ವಿವರಿಸುತ್ತಾ,ತಾನೂ ಕೂಡಾ ಕುತ್ತೆತ್ತೂರಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದು,ಇವತ್ತು ಎಂ ಆರ್ ಪಿ ಎಲ್ ನಂತಹ ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡುವ ಮೊದಲು ಹಲವಾರು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ದಾಟಿ ಬಂದುದಾಗಿ ವಿವರಿಸುತ್ತಾ,ಬಾಲ್ಯದಲ್ಲಿ ದೂರದಿಂದ ನಡೆದುಬಂದು ಶಾಲೆಯಲ್ಲಿ ಮಧ್ಯಾಹ್ನ ಬುತ್ತಿ ತೆರೆದು ಸಹ ವಿದ್ಯಾರ್ಥಿಗಳೊಂದಿಗೆ ಊಟ ಮಾಡುವಾಗ ಪಕ್ಕದವನ ಬುತ್ತಿಯಲ್ಲಿ ಪದಾರ್ಥ ಇಲ್ಲದಿದ್ದಾಗ, ಅವನ ಬುತ್ತಿಗೆ ಪದಾರ್ಥ ಹಾಕಿ ಊಟ ಮಾಡಿದ್ದನ್ನು ನೆನಪಿಸುತ್ತಾ ಅದೇ ಮನೋಭಾವನೆಯಿಂದ ಸ್ಪಂದಿಸಲು,ಕೇವಲ ಏಳು ಮಂದಿ ಉದ್ಯೋಗಿಗಳಿಂದ ಆರಂಭವಾದ ಸ್ಪಂದನ ಸಂಸ್ಥೆ ಇಂದು ಇನ್ನೂರು ಮಂದಿ ಸದಸ್ಯರನ್ನು ಹೊಂದಿದ್ದು ಕಳೆದ ಹದಿನೈದು ವರ್ಷಗಳಲ್ಲಿ ಇಪ್ಪತ್ತು ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ ಎಂದು‌ ವಿವರಿಸಿದರು.ಶ್ರೀ ಯತೀಶ್ ಕೂಡಾ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ವಿವರಿಸಿದರು.
ಸಿ ಎಸ್ ಸಿ ಅಕಾಡೆಮಿ ಯ ನಿರ್ವಾಹಕ ಶ್ರೀ ಚಂದ್ರಶೇಖರ ಹೆಬ್ಬಾರ್ ಕೊಲ್ಯ‌ ಅವರು ತಮ್ಮ ಭಾಷಣದಲ್ಲಿ “ಸ್ವಾಮಿ ವಿವೇಕಾನಂದರ ಕೆಲವು ಘಟನೆಗಳನ್ನು ವಿವರಿಸುತ್ತಾ,ಸ್ವಾಮಿ ವಿವೇಕಾನಂದರು ತಮ್ಮ ಮೊದಲ ಪ್ರವಚನಕ್ಕೆ ವಿದೇಶ ಪ್ರವಾಸ ಬೆಳೆಸುವ ಮೊದಲು,ತಾಯಿ ಮಗನನ್ನು ಪರೀಕ್ಷೆಗೆ ಒಳಪಡಿಸಿ ಒಂದು ಆಪಲ್ ಹಣ್ಣು ಮತ್ತು ಚೂರಿಯನ್ನು ಕೊಟ್ಟು,ಹಣ್ಣು ತಿನ್ನಲು ಹೇಳಿ,ಬಳಿಕ ಮಗ ವಿವೇಕಾನಂದ ಚೂರಿಯನ್ನು ವಾಪಾಸು ತಾಯಿಗೆ ಕೊಡುವಾಗ,ಚೂಪಿನ ತುದಿಯನ್ನು ತನ್ನ ಕಡೆಮುಖಮಾಡಿ ಹಿಡಿಯ ಭಾಗವನ್ನು ತಾಯಿ ಕೈಯಲ್ಲಿ ಕೊಟ್ಟಾಗ ತಾಯಿ,ಮಗ ವಿವೇಕಾನಂದರನ್ನು ಪರೀಕ್ಷೆಯಲ್ಲಿ ಪಾಸಾದುದಾಗಿ ತಿಳಿಸಿದರು ಮತ್ತು ಯಾರು ತನ್ನ ಹಿತ ಬದಿಗಿಟ್ಟು ಸಮಾಜ ಹಿತಕ್ಕಾಗಿ ಸ್ಪಂದಿಸುತ್ತಾರೋ ಅವರು ಭೋದನಾರ್ಹರೆಂದು ಘೋಷಿಸಿದನ್ನು ಶ್ರೀ ಹೆಬ್ಬಾರ್ ಸಭಿಕರ ಗಮನಕ್ಕೆ ತಂದರು ಹಾಗೂ ಟಾಟಾ ಸ್ಟೀಲ್ ನ ಪಿತಾಮಹ ಜೆಮ್ ಶೆಡ್ ಜಿ ಟಾಟಾ ವಿವೇಕಾನಂದರನ್ನು ವಿದೇಶ ಪ್ರಯಾಣ ಸಮಯ ಹಡಗಿನಲ್ಲಿ ಭೇಟಿಯಾದ ಸಂದರ್ಭವನ್ನು ನೆನಪಿಸಿ, ಕಬ್ಬಿಣವನ್ನು ಹುಡುಕಿಕೊಂಡು ವಿದೇಶಕ್ಕೆ ತೆರಳುವುದಕ್ಕಿಂತ ನಮ್ಮಲ್ಲಿರುವ ಕಬ್ಬಿಣದ ಅದಿರುಗಳನ್ನು ಉಪಯೋಗಿಸಿಕೊಂಡು ದೇಶವನ್ನು ಮುನ್ನಡೆಸಲು ಸಾಧ್ಯ ಎಂಬ ಘಟನೆಯನ್ನು ರಸವತ್ತಾಗಿ ವಿವರಿಸಿದ್ದರು.ಹಿರಿಯ ಉಪನ್ಯಾಸಕ ಶ್ರೀ ಚಂದ್ರನಾಥ್ ರವರು ಸ್ವಾಮಿ ವಿವೇಕಾನಂದರು ಭಾರತ ದೇಶದ ಆಗಿನ ಒಡೆದು ಹೋಗಿದ್ದ ಸಮಾಜವನ್ನು ಒಟ್ಟುಗೂಡಿಸುವಲ್ಲಿ ಮಾಡಿದ ಸೇವೆಗಳನ್ನು ಕೊಂಡಾಡಿದರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಶ್ರೀಮತಿ ಡಾ.ಜ್ಯೋತಿ ಯವರು,ವಿವೇಕಾನಂದರು ತಮ್ಮ ಮೂವತ್ತೆರಡು ವರ್ಷಗಳ ಆಯಸ್ಸುಗಳಲ್ಲಿ ಮಾಡಿದ ಸಾಧನೆ ಮತ್ತು ದೇಶದ ಎಲ್ಲಾ ಧರ್ಮದವರನ್ನು ಒಟ್ಟು ಕೂಡಿಸುವಲ್ಲಿ ಮಾಡಿದ ಶ್ರಮ ಮತ್ತು ದೇಶದ ಜನತೆಯನ್ನು ಎಳಿ ಎದ್ದೇಳಿ ಗುರಿ ತಲುಪುವವರೆಗೆ ನಿಲ್ಲದಿರಿ ಎಂಬ ಘೋಷಣೆಯನ್ನು ನೆನಪಿಸುತ್ತಾ,ಕಾಲೇಜಿನ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಯಲ್ಲಿ ಎಲ್ಲರೂ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆಯಾಗಲು ಎಡೆಬಿಡದೆ ಅಧ್ಯಯನ ಮಾಡಬೇಕಾಗಿ ಮನವರಿಕೆ ಮಾಡಿದರು.
ಹಿರಿಯ ಉಪನ್ಯಾಸಕಿ ಶ್ರೀಮತಿ ಶೋಭಾ ಶರ್ಮ ರವರು ದ್ವಿತೀಯ ಪಿ ಯು
ಹಾಗೂ ವಾಜಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಯವರು ಪ್ರಥಮ ಪಿ ಯು ವಿದ್ಯಾರ್ಥಿಗಳ ಮೌಲ್ಯಮಾಪನ ಬಗ್ಗೆ ಪೋಷಕರಿಗೆ ವಿವರಿಸಿದರು. ಸಭೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಶ್ರೀಮತಿ ತ್ರಿವೇಣಿಯವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ