ಹುಬ್ಬಳ್ಳಿ:ಮಕರ ಸಂಕ್ರಮಣ ಹಿನ್ನೆಲೆ ಹುಬ್ಬಳ್ಳಿ ನಗರದ ಮಾರುಕಟ್ಟೆಗಳು ಜನಜಂಗುಳಿಯಿಂದ ಕೂಡಿವೆ. ಸಂಕ್ರಾಂತಿಯ ಮೊದಲ ದಿನ ಭೋಗಿ ಆಚರಣೆಯ ಸಲುವಾಗಿ ಸಾರ್ವಜನಿಕರು ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಹುಬ್ಬಳ್ಳಿಯ ಜನತಾ ಬಜಾರ್,ದುರ್ಗದಬೈಲ್ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನರು ಹೂವು, ಹಣ್ಣು, ತರಕಾರಿ, ಕುಸುರೆಳ್ಳು, ಕಬ್ಬು, ಮಾವಿನಕಾಯಿ ಹೀಗೆ ಹಲವಾರು ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ನಾಳೆ ಬೋಗಿ ಹಬ್ಬದ ಪ್ರಯುಕ್ತ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಮಹಿಳೆಯರು ಸಂಭ್ರಮಿಸುತ್ತಾರೆ. ರಂಗೋಲಿ ಸಂಭ್ರಮದ ಜೊತೆ ಶೇಂಗಾ, ಎಳ್ಳಿನ ಹೊಳಿಗೆ ಮಾಡಿ ಹಬ್ಬ ಆಚರಣೆ ಮಾಡುತ್ತಾರೆ, ಅದಲ್ಲದೆ ಅಲಸಂದಿ, ಬಟಾಣಿ, ಕ್ಯಾರೆಟ್, ಬದನೆಕಾಯಿ ಸೇರಿ ವಿವಿಧ ತರಕಾರಿ, ಕಾಳುಗಳನ್ನ ಬಳಸಿ ರುಚಿಕರವಾದ ಪಲ್ಯ ಮತ್ತು ಸಜ್ಜಿ ರೊಟ್ಟಿ ತಯಾರಿಸುತ್ತಾರೆ.
ಮುಖ್ಯವಾಗಿ ಬೋಗಿ ದಿನ ಸಜ್ಜಿ ರೊಟ್ಟಿ ತಯಾರಿಸಲು ಗ್ರಾಮೀಣ ಭಾಗದಲ್ಲಿ ಗ್ಯಾಸ್ ಸ್ಟವ್ ಬಳಸದೇ ಸೌದೆ ಉರಿಸಿ ಅಡುಗೆ ಮಾಡುತ್ತಾರೆ.ಈ ಭಾಗದಲ್ಲಿ ಹಬ್ಬದ ವಿಶೇಷ ಸಜ್ಜಿರೊಟ್ಟೆ ಆಗಿದೆ.
ವರದಿ-ಅಕ್ಷತಾ ಮಿರಜಕರ್